ಸಮಸ್ತ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ವೈದ್ಯ
ಸವದತ್ತಿ 09: ತಾಲೂಕಿನ ಪ್ರತಿಯೊಂದು ಸಮಾಜದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುವದರ ಜೊತೆಗೆ ತಾಲೂಕಿನ ಸಮಸ್ತ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಜೈನ ಬಸದಿಯಲ್ಲಿ ಜೈನ ಸಮಾಜ ಬಾಂಧವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ ಜೈನ ಸಮಾಜ ಬಾಂಧವರ ಬೇಡಿಕೆಗಳಿಗೆ ಸ್ಪಂಧಿಸುವದರ ಜೊತೆಗೆ ಅವುಗಳನ್ನು ಈಡೇರಿಸುವಂತ ಕಾರ್ಯವನ್ನು ಮಾಡುವದಾಗಿ ಹೇಳಿದರು.
ಡಾ.ಅಭಿನಂದನ ಕಬ್ಬಿಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಬಣ್ಣ ಬೋಗಾರ, ಚಂದ್ರಣ್ಣ ಶಾಮರಾಯನವರ, ದೀಪಕ ಜಾನವೇಕರ, ಮಂಜುನಾಥ ಮುತ್ತಿನ, ಶಾಂತಿಲಾಲ ನಹಟಾ, ಭೂಪಾಲ ಬಾಂಡೇಕರ, ಡಾ.ಅನುಪ ಕಬ್ಬಿಣ, ಮಹಾವೀರ ಚೋಪ್ರಾ, ಅರವಿಂದ ಬಾಂಡೇಕರ, ರಾಜಶೇಖರ ಶಾಮರಾಯನವರ ಹಾಗೂ ಜೈನ ಸಮಾಜಬಾಂಧವರು ಮತ್ತು ದಿಗಂಬರ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು. ಡಾ.ಅನುಪ ಕಬ್ಬಿಣ ಸ್ವಾಗತಿಸಿದರು.