ರಾಣೆಬೆನ್ನೂರ

ತಹಶೀಲ್ದಾರ ಕಚೇರಿ ಎದುರುಗಡೆ ಮೌನ ಪ್ರತಿಭಟನೆ

ತಹಶೀಲ್ದಾರ ಕಚೇರಿ ಎದುರುಗಡೆ ಮೌನ ಪ್ರತಿಭಟನೆ

ರಾಣೇಬೆನ್ನೂರು 19: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮೀಣ ಆರಕ್ಷಕ ವೃತ್ತ ನೀರೀಕ್ಷಕರ ಕಚೇರಿಯನ್ನು ಕುಮಾರಪಟ್ಟಣ ಗ್ರಾಮಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿದ್ದು ಯಾವುದೇ ಕಾರಣಕ್ಕೂ ಕಚೇರಿಯನ್ನು ಸ್ಥಳಾಂತರ ಮಾಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ)  ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ ಕಚೇರಿ ಎದುರುಗಡೆ ಮೌನ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.  

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಅವರು ತಾಲೂಕು ಹಾವೇರಿ ಜಿಲ್ಲೆಯಲ್ಲಿಯೇ ದೊಡ್ಡದಾಗಿದ್ದು  ವಾಣಿಜ್ಯ ನಗರವಾಗಿದೆ. ಇಲ್ಲಿಯವರೆಗೂ ವೃತ್ತ ನೀರೀಕ್ಷಕರ ಕಚೇರಿಯು ನಗರದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಯಾರದೋ ಹಿತಾಸಕ್ತಿಗಾಗಿ ಸಾರ್ವಜನಿಕರ ಹಿತಾಸಕ್ತಿ ಬಲಿಕೊಡುವುದು ಸಮಂಜಸವಲ್ಲ. ದೂರದ ಕುಮಾರಪಟ್ಟಣ ಗ್ರಾಮಕ್ಕೆ ಸ್ಥಳಾಂತರಗೊಂಡರೆ ತಾಲೂಕಿನ ಜನರಿಗೆ ಅನಾನುಕೂಲವಾಗುತ್ತದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೇ ಕಚೇರಿ ಸ್ಥಳಾಂತರ ಮಾಡುತ್ತಿರುವುದು ಜನ ವಿರೋಧಿ ನೀತಿಯಾಗಿದೆ ಎಂದು ಹೇಳಿ ಸ್ಥಳಾಂತರವನ್ನು ಖಂಡಿಸಿದ್ದಾರೆ.  

ಮನವಿ ಸಲ್ಲಿಕೆಯ ಮುಂಚೂಣಿಯಲ್ಲಿ ತಾಲೂಕ ಅಧ್ಯಕ್ಷ ಕೊಟ್ರೇಶ ನೆಲೋಗಲ್, ನಗರ ಅಧ್ಯಕ್ಷ ವಸಂತ ಪಾಟೀಲ, ಕಾರ್ಯದರ್ಶಿ ಅಜ್ಜಯ್ಯ ನರಗುಂದ, ಬಸವರಾಜ ಪಾಟೀಲ, ಚಂದ್ರಶೇಖರ ಕಡ್ಲಿಬಾಳ, ನೂರಭಾಷಾ ಹಿರಿಯೂರ, ಮಹಿಳಾ ಘಟಕದ ಲಕ್ಷ್ಮೀ ಕದರಮಂಡಲಗಿ, ಉಮಾ ಡೊಂಗ್ರೇಕರ, ಪ್ರೇಮಾ ಮೂಲಿಮನಿ, ರಿಯಾಜ ಅಹ್ಮದ್ ಲೋಹಾರ, ಪುಷ್ಪಾ ಅಬ್ಬಿಗೇರಿ, ಯಲ್ಲಪ್ಪ ಮರಾಠೆ, ಯಸೂಪ್ ಸೈಕಲ್ ಗಾರ, ಸಿ.ಬಿ.ದೊಡ್ಡಗೌಡ್ರ, ಪ್ರೇಮಾ ಕೊಪ್ಪದ, ರಮೇಶ ಸುಂಕದ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ