ಸಮ್ಮೇದ ಶಿಖರ ರಕ್ಷಣೆಗೆ ಜೈನರಿಂದ ಮೌನ ಪ್ರತಿಭಟನೆ
ತಾಳಿಕೋಟೆ27: ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನರ ಪವಿತ್ರ ಕ್ಷೇತ್ರ ಸಮ್ಮೇದ ಶಿಖರಜಿಯನ್ನು ತೀರ್ಥ ಸ್ಥಳವಾಗಿ ಉಳಿಸಲು ಆಗ್ರಹಿಸಿ ತಾಲೂಕು ಜೈನ ಸಮಾಜದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ ಮೂಲಕ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಪಟ್ಟಣದ ರಾಜವಾಡೆಯಲ್ಲಿರುವ ಆದಿನಾಥ ಜೈನ ಮಂದಿರದಿಂದ ಕಪ್ಪು ಪಟ್ಟಿ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೌನ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಅನಾದಿಕಾಲದಿಂದಲೂ ಜೈನರ ಪವಿತ್ರ ಕ್ಷೇತವಾಗಿರುವ ಸಮ್ಮೇದ ಶಿಖರಜಿಯು ಇಪ್ಪತ್ತು ಜನ ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಈ ಕ್ಷೇತ್ರದ ದರ್ಶನಕ್ಕಾಗಿ ವಿಶ್ವದ ಹಲವಾರು ದೇಶದ ಜೈನರು ಬರುತ್ತಾರೆ, ವಘೇಲ ರಾಜವಂಶದ ವಿರಾಢವಲ ಮತ್ತು ವಿಶಾಲದೇವನ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಸ್ತುಪಾಲನು ಈ ಶಿಖರವನ್ನು ಜೈನರ ತೀರ್ಥಕ್ಷೇತ್ರವೆಂದು ಘೋಷಿಸಿದ್ದಾನೆ. ಮೊಗಲ ದೊರೆ ಅಕ್ಬರನು ಕೂಡ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಇದು ಜೈನರ ಕ್ಷೇತ್ರವೆಂದು ಆದೇಶ ಹೊರಡಿಸಿದ್ದಾನೆ. ಬ್ರಿಟಿಷ್ರು ಕೂಡ ಸಮ್ಮೇದ ಶಿಖಜರ್ಿ ಜೈನರ ಪುಣ್ಯಕ್ಷೇತ್ರ ಎಂದು ಆದೇಶಿಸಿದ್ದಾರೆ. ಆದರೆ ಸ್ವಾತಂತ್ರ್ಯ ಬಂದ ನಂತರದ ಸರಕಾರಗಳು ಮೈಕ್ರೋ ಮೈನಾರಟಿಯಲ್ಲಿರುವ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿಮರ್ಿಸುತ್ತಿವೆ. ಜೈನರ ಪ್ರತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪ್ರವಾಸಿತಾಣವನ್ನಾಗಿ ಘೋಷಿಸಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ. ಭಾರತದ ಸಂವಿಧಾನದ ಪ್ರಕಾರ ಭಾರತದಲ್ಲಿ ಜೈನರು ಹೊಂದಿರುವ ಪವಿತ್ರ ತೀರ್ಥಕ್ಷೇತ್ರದ ಪಾವಿತ್ರ್ಯತೆಯನ್ನು ರಕ್ಷಿಸುವದು ಭಾರತ ಸರಕಾರದ ಕರ್ತವ್ಯವಾಗಿದೆ. ಸರಕಾರ ಅನ್ಯಧಮರ್ಿಯರ ತೀರ್ಥಕ್ಷೇತ್ರಗಳ ಬಗ್ಗೆ ಹೇಗೆ ಕಾಳಜಿಯನ್ನು ಹೊಂದಿದೆಯೊ ಅದೇ ರೀತಿ ಜೈನರ ಸಮ್ಮೇದ ಶಿಖರದ ಕಾಳಜಿಯನ್ನು ವಹಿಸಿಕೊಳ್ಳಬೇಕಾದದ್ದು ಸರಕಾರದ ಕರ್ತವ್ಯವಾಗಿದೆ. ಪ್ರವಾಸಿತಾಣ ಎಂದು ಘೋಷಿಸಿರುವ ಆಜ್ಞೆಯನ್ನು ರದ್ದು ಪಡಿಸುವಂತೆ ಜಾರ್ಖಂಡ ಸರಕಾರಕ್ಕೆ ಆದೇಶ ನೀಡಬೇಕು ಹಾಗೂ ಸಮ್ಮೇದ ಶಿಖರದ ಗೌರವಕ್ಕೆ ಚ್ಯುತಿ ಬಾರದಂತೆ ಮುನ್ನೆಚ್ಚರಿಕೆ ವಹಿಸುವದಾಗಿ ಲಿಖಿತ ಭರವಸೆ ನೀಡಬೇಕೆಂದು, ಭವಿಷ್ಯದಲ್ಲಿ ಕೂಡ ಜೈನರ ತೀರ್ತಕ್ಷೇತ್ರಗಳಿಗೆ ತೊಂದರೆಯಾಗದಂತೆ ಕಾನೂನು ತರಬೇಕೆಂದು ಎಂದು ಮನವಿ ಸಲ್ಲಿಸಲಾಯಿತು.
ಜೈನಸಮಾಜದ ಅಧ್ಯಕ್ಷ ಪದ್ಮರಾಜ ಧನಪಾಲ, ಉಪಾಧ್ಯಕ್ಷ ವಜ್ರಕುಮಾರ ಪ್ರಥಮಶೆಟ್ಟಿ, ಕಾರ್ಯದಶರ್ಿ ಪ್ರಭಾಕರ ಗೋಗಿ, ಕೆ.ಸಿ.ಹುಬ್ಬಳ್ಳಿ, ಗಣ್ಯರಾದ ಪದ್ಮರಾಜ ಯಾತಗಿರಿ, ಶಾಂತಿನಾಥ ಹುಬ್ಬಳ್ಳಿ, ಸುರೇಶ ಪ್ರಥಮಶೆಟ್ಟಿ, ಸಂತೋಷ ಪ್ರಥಮಶೆಟ್ಟಿ, ಸಾತಪ್ಪ ಗೊಂಗಡಿ, ನಿವೃತ್ತ ಸೈನಿಕ ಶ್ರೀಪಾಲ ಸಂಗಮಿ , ನೇಮಿನಾಥ ಧನಪಾಲ, ಶ್ರೀಮಂದ್ರಕುಮಾರ ಸುರಪುರ, ಅಜಿತ ಸುರಪುರ, ಭರತೇಶ ಸುರಪುರ ಹಾಗೂ ಜೈನ ಮಹಿಳಾ ಮಂಡಳದ ಸದಸ್ಯರು ಇದ್ದರು.