ಚಿಕ್ಕೋಡಿ

ಮ್ಯಾಗ್ನಂ ಟಫ್ ಗಾಜು ಕಾರ್ಖಾನೆಗೆ ಸಿದ್ದೇಶ್ವರ ಸ್ವಾಮೀಜಿ ಭೇಟಿ

ಮ್ಯಾಗ್ನಂ ಟಫ್ ಗಾಜು ಕಾರ್ಖಾನೆಗೆ ಸಿದ್ದೇಶ್ವರ ಸ್ವಾಮೀಜಿ ಭೇಟಿ

ಚಿಕ್ಕೋಡಿ 03: ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಜೊಲ್ಲೆ ಉದ್ಯೋಗ ಸಮೂಹದ ಮ್ಯಾಗ್ನಂ ಟಫ್ ಗಾಜು ಕಾರ್ಖಾನೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ಸಿದ್ದೇಶ್ವರ ಸ್ವಾಮೀಜಿ ಸೌಹಾರ್ದಯುತವಾಗಿ ಗಾಜು ಕಾರ್ಖಾನೆಗೆ ಭೇಟಿ ನೀಡಿದಾಗ, ಅವರನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಆತ್ಮೀಯವಾಗಿ ಬರಮಾಡಿಕೊಂಡು ಅವರ ಆಶೀರ್ವಾದ ಪಡೆದರು.  

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಮುಂದೆ ಒಂದು ಗುರಿ ಇರಬೇಕು. ಹಿಂದೆ ಗುರುಗಳ ಆಶೀರ್ವಾದ ಇರಬೇಕು. ಈ ಗುರುಗಳ ದಿವ್ಯಾಶೀರ್ವಾದದಿಂದ ಜೊಲ್ಲೆ ಉದ್ಯೋಗ ಸಮೂಹ ಹೆಮ್ಮರವಾಗಿ ಬೆಳೆದಿದೆ. ಸಿದ್ದೇಶ್ವರ ಸ್ವಾಮೀಜಿ ನಮ್ಮ ಕಾರ್ಖಾನೆಗೆ ಭೇಟಿ ನೀಡಿರುವುದು ನಮ್ಮ ಸೌಭಾಗ್ಯ ಎಂದರು.  

ಬಳಿಕ ಸಿದ್ದೇಶ್ವರ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ನೆರವೇರಿಸಿದರು.  ಸಂಸ್ಥೆಯ ಸಿಬ್ಬಂದಿಗೆ ಆಶೀರ್ವಚನ ನೀಡಿದರು. ಅಲ್ಲಿನ ಕಾರ್ಯವೈಖರಿ, ಗಾಜಿನ ಗುಣಮಟ್ಟ, ಕಾರ್ಮಿಕ ಸ್ನೇಹಿ ವಾತಾವರಣವನ್ನು ಖುದ್ದು ಪರೀಶೀಲಿಸಿ, ಕಾರ್ಖಾನೆಯ ಸುವ್ಯವಸ್ಥೆಯನ್ನು ನೋಡಿ ಹರ್ಷ ವ್ಯಕ್ತ ಪಡಿಸಿದರು. 


ಸುದ್ದಿ ಓದಿ