ಸಂಭ್ರಮದಿಂದ ಸಿದ್ಧಾರೂಢ ಸ್ವಾಮೀಜಿಯ ಮಹಾರಥೋತ್ಸವ
ಲೋಕದರ್ಶನ ವರದಿ
ರಾಣಿಬೆನ್ನೂರ 08: ಇಲ್ಲಿನ ಸಿದ್ಧಾರೂಢ ಮಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 21ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಶನಿವಾರ ಸಂಜೆ ಸಿದ್ಧಾರೂಢ ಸ್ವಾಮೀಜಿಯ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.
ಶ್ರೀಮಠದ ಮಠದ ಮಲ್ಲಯ್ಯ ಸ್ವಾಮಿಗಳ ನೇತೃತ್ವದಲ್ಲಿ ಆರಂಭವಾದ ರಥೋತ್ಸವ ಮಠದಿಂದ ಬನ್ನಿಮರದವರೆಗೆ ಸಂಚರಿಸಿ ನಂತರ ಮಠಕ್ಕೆ ಹಿಂದಿರುಗಿತು. ತಾಲೂಕಿನ ಹಿರೇಬಿದರಿ, ನಾಗೇನಹಳ್ಳಿ, ಯರೇಕುಪ್ಪಿ ಹಾಗೂ ನಗರದ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಹರ ಹರ ಮಹಾದೇವ ಎನ್ನುತ್ತ ಭಕ್ತಿಭಾವದಿಂದ ರಥವನ್ನು ಎಳೆದರು.
ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮಿಗಳು, ಸೌಟಗಿಯ ಲಿಂಗಯ್ಯ ಮಹಾಸ್ವಾಮಿಗಳು, ಸ್ಥಳೀಯ ಸಂಚಾಲಕ ಕರಬಸಪ್ಪ ಹಳ್ಳಳ್ಳಿ, ಪವನಕುಮಾರ ಮಲ್ಲಾಡದ, ಪೂರ್ಣಿಮಾ ಶಿವಪ್ಪ ಕುರವತ್ತಿ, ಪೂರ್ಣಿಮಾ ರಂಗನಗೌಡ ಅಯ್ಯನಗೌಡ್ರ, ಕುಮಾರ ಹಾಲಮಠ, ದೇವೇಂದ್ರ್ಪ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.