ಗದಗ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಗದಗ 18: ನಗರದ ಅಶ್ವತ್ಥಾಮ ವೃಕ್ಷ ಸಿದ್ರಾಮೇಶ್ವರ ನಗರ ಕಿತ್ತೂರ ಚನ್ನಮ್ಮ ಸರ್ಕಲ್ ಹತ್ತಿರದಲ್ಲಿ ಭೂಮಿ ತಾಯಿ ಮಕ್ಕಳ ಬಳಗದ ಅಧ್ಯಕ್ಷ ಅನಿಲ ಈರಪ್ಪ ಶಾಂತಿಗೇರಿ ಹಾಗೂ ಪದಾಧಿಕಾರಿಗಳ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. 

ಕಾರ್ಯಕ್ರಮದ ಮೊದಲು ಶಿವಯೋಗಿ ಸಿದ್ದರಾಮೇಶ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. 

ಎಸ್. ಎನ್. ಬಳ್ಳಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು, ಗದಗ, ವ್ಹಿ. ಎಮ್. ಹಿರೇಮಠ, ಅಧ್ಯಕ್ಷರು ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ, ಮುತ್ತಣ್ಣ ಪೂಜಾರ ಸದಸ್ಯರು ಗ್ರಾಮ ಪಂಚಾಯತ ಮಲ್ಲಸಮುದ್ರ ಅಸುಂಡಿ, ಶಫೀ ನಾಗರಕಟ್ಟಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಇವರೆಲ್ಲರನ್ನೂ ಸನ್ಮಾನಿಸಲಾಯಿತು.

ಸನ್ಮಾನಿತರು ಸಿದ್ದರಾಮೇಶ್ವರ ಕುರಿತು ಮಾತನಾಡಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ಶಂಕ್ರಪ್ಪ ಗುಜಮಾಗಡಿ ನಿರೂಪಿಸಿದರು. ಕೊನೆಯಲ್ಲಿ ರವಿ ಕೋಟಿಯವರು ವಂದಿಸಿದರು.

ಗದಗ ತಾಲೂಕ ಪಂಚಾಯತ ಅಧ್ಯಕ್ಷ ವಿದ್ಯಾದಾರ ದೊಡ್ಡಮನಿ, ನಾಗರಡ್ಡಿ ನಿಡಗುಂದಿ, ವಿಜಯ ಗುಂಜಿ, ಸಂಕನಕಲ್ಲ ರಮೇಶ ಬೆಟಗೇರಿ, ಹನಮಂತಪ್ಪ ಕೋಟಿ, ನಾಗಾರ್ಜುನ ಕಾಳೆ, ಮಂಜುನಾಥ ಅಗೆದಾಳ ಉಪಸ್ಥಿತರಿದ್ದರು.

ಸುದ್ದಿ ಓದಿ