ಮನರಂಜನೆ

ಪುನೀತ ನಮನ: ಮರಣೋತ್ತರ ಪದ್ಮಶ್ರೀಗೆ ಸಿದ್ದರಾಮಯ್ಯ ಆಗ್ರಹ

ಪುನೀತ ನಮನ: ಮರಣೋತ್ತರ ಪದ್ಮಶ್ರೀಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ನ.16: ಇತ್ತೀಚೆಗೆ ವಿಧಿವಶರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ನಟ, ನಟಿಯರು, ರಾಜಕಾರಣಿಗಳು ಸೇರಿದಂತೆ ಗಣ್ಯರು ನುಡಿನಮನ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪುನೀತ್ ಅವರ ವಿನಯ, ವಿಧೇಯತೆಯನ್ನು ಸ್ಮರಿಸಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ‘ರಾಜಕುಮಾರ’ ಚಿತ್ರ ವೀಕ್ಷಿಸಿದ್ದನ್ನು ನೆನಪಿಸಿಕೊಂಡರು. 

ನಯ, ವಿನಯ, ಸರಳತೆ, ಸಹಕಾರ ನೀಡುವ ಗುಣದಿಂದ ಅವರು ಜನಪ್ರಿಯರಾದರು. ‘ರಾಜಕುಮಾರ’ ಚಿತ್ರ ವೀಕ್ಷಿಸುವಂತೆ ಕೇಳಿಕೊಂಡಿದ್ದರು.  ಬಹುದಿನಗಳಿಂದ ಸಿನಿಮಾ ನೋಡದಿದ್ದ ತಾವು ಪುನೀತ ಮಾತಿಗೆ ಮನ್ನಣೆಯಿತ್ತು ಮೈಸೂರಿನ ಸರಸ್ವತಿ ಚಿತ್ರಮಂದಿರದಲ್ಲಿ ‘ರಾಜಕುಮಾರ’ ವೀಕ್ಷಿಸಿದೆ ಎಂದರು. 

ಪುನೀತ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಿಸಿದ್ದರು ಸ್ವಾಗತಾರ್ಹ.  ಅಂತೆಯೇ, ಸಂಪುಟದಲ್ಲಿ ಚರ್ಚಿಸಿ ಮರಣೋತ್ತರ ಪದ್ಮಶ್ರೀ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿ ಓದಿ