ತಾಳಿಕೋಟಿ

ಸಿದ್ದನಗೌಡರ ಸಮಾಜ ಸೇವೆ ಶ್ಲಾಘನೀಯ- ಚಬನೂರ ಶ್ರೀ

ಸಿದ್ದನಗೌಡರ ಸಮಾಜ ಸೇವೆ ಶ್ಲಾಘನೀಯ- ಚಬನೂರ ಶ್ರೀ

ತಾಳಿಕೋಟಿ 16:  ಕಳೆದ ಮೂರು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರ ಸೇವೆಯನ್ನು ಮಾಡುತ್ತಿರುವ ಸಮಾಜ ಸೇವಕರಾದ ಸಿದ್ದನಗೌಡ ಬಿರಾದರ ಇವರ ಸೇವೆ ಶ್ಲಾಘನೀಯವಾಗಿದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಚಬನೂರು ಹಿರೇಮಠದ ಜ್ಯೋತಿಷ್ಯ ರತ್ನ ಪರಮ ಪೂಜ್ಯ ರಾಮಲಿಂಗಯ್ಯ ಶ್ರೀಗಳು ಹೇಳಿದರು.    

ತಾಲೂಕಿನ ಜಲಪುರ್ ಗ್ರಾಮದಲ್ಲಿ ಇತ್ತೀಚಿಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ನಿಮಿತ್ಯವಾಗಿ ಹಮ್ಮಿಗೊಂಡು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  ನಾನು ಬಹಳ ವರ್ಷಗಳಿಂದ ಸಿದ್ದನಗೌಡ ಬಿರಾದರ್ ಅವರನ್ನು ನೋಡುತ್ತಿದ್ದೇನೆ ಅವರೊಬ್ಬ ನಿಸ್ವಾರ್ಥ ಮನೋಭಾವದ ವ್ಯಕ್ತಿಯಾಗಿದ್ದು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಅವರೆಂದು ಪ್ರಚಾರವನ್ನು ಬಯಸಿದವರಲ್ಲ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಈ ಸಂದರ್ಭದಲ್ಲಿ ಅವರು ಸುಮಾರು 300 ಮಹಿಳೆಯರಿಗೆ ಸೀರೆಗಳನ್ನು ಹಂಚಿದ್ದಾರೆ ಹೀಗೆ ಹತ್ತು ಹಲವು ಸಮಾಜ ಸೇವಾ ಕೆಲಸಗಳನ್ನು ಮಾಡುತ್ತಿದ್ದೆ ಅವರಿಗೆ ನಾವೆಲ್ಲರೂ ಸಹಕರಿಸಬೇಕು ಎಂದರು.   

ತಾಳಿಕೋಟಿ ಘನಮಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್‌.ಎಂ. ಸಜ್ಜನ ಮಾತನಾಡಿ ಈ ಒಂದು ಸಣ್ಣ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದನಗೌಡ ಬಿರಾದರವರು ಮಾಡುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಮೆಚ್ಚುವಂತದ್ದು ಅವರು ಹೃದಯ ವೈಶಾಲ್ಯತೆಯನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ ಬಡವರ ಕುರಿತು ಅವರಿಗೆ ಅಪಾರ ಕಾಳಜಿ ಇದೆ ಅದುವೇ ಅವರಿಗೆ ಸಮಾಜ ಸೇವೆ ಮಾಡಲು ಪ್ರಯತ್ನಿಸುತ್ತದೆ ಎಂದರು.    

ಇದೇ ಸಂದರ್ಭದಲ್ಲಿ ಸುಮಾರು 300 ಬಡ ಮಹಿಳೆಯರಿಗೆ ಸಿದ್ಧನಗೌಡ ಬಿರಾದರ  ಕುಟುಂಬದ ವತಿಯಿಂದ ಸೀರೆಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮದ ಗಣ್ಯರಾದ ಟೋಪಯ್ಯ. ಎಸ್‌. ಎನ್‌. ಪಾಟೀಲ. ಮಲ್ಲಯ್ಯ ಹಿರೇಮಠ. ಗ್ರಾಪಂ ಸದಸ್ಯ ಸಿದ್ದನಗೌಡ ಬ ಬಿರಾದರ. ಚನ್ನಬಸಯ್ಯ ಹಿರೇಮಠ. ವೀರಭದ್ರ ಕರಿ ಗೌಡರ. ಚನ್ನರಡ್ಡಿ ಟಕ್ಕಳಕಿ.  ಬಾಬುಗೌಡ ಪಾಟೀಲ. ಭೀಮನ್ ಗೌಡ ನರಸಿಣಗಿ. ಮಡಿವಾಳಯ್ಯ ಹಿರೇಮಠ .ಮೌನೇಶ್ ಪೂಜಾರಿ ವೀರೇಶ ಸಾಲೋಟಗಿ. ಬಸನಗೌಡ ಬಿರಾದರ. ಮಹಾಲಿಂಗ ಬುದಿ ಮತ್ತಿತರರು ಇದ್ದರು. 


ಸುದ್ದಿ ಓದಿ