ಶ್ಯಾಮ್ ಪ್ರಸಾದ ಮುಖರ್ಜಿ ಬಲಿದಾನ ದಿವಸ್
ಕುಷ್ಟಗಿ 23: ಜನ ಸಂಘ ಪರಿವಾರದ ಸಂಸ್ಥಾಪಕ ಶ್ಯಾಮ್ ಪ್ರಸಾದ ಮುರ್ಖಜೀ ಅವರ ಬಲಿದಾನ ದಿವಸ್ ಅಂಗವಾಗಿ ಗುರುವಾರ ಬೆಳಿಗ್ಗೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಶ್ಯಾಮ್ ಪ್ರಸಾದ ಮುರ್ಖಜೀ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಾರೆ್ಪಣ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಈರಣ್ಣ ಸಬರದ, ಕೆ.ಮಹೇಶ, ಶಶಿಧರ ಕವಲಿ, ಮಾರುತಿ ತರಲಕಟ್ಟಿ, ಲಕ್ಷ್ಮಣ ಕಟ್ಟಿಹೊಲ, ರವಿ ಕಟ್ಟಿಮನಿ, ಶರಣು ಪಾಟೀಲ್, ದೊಡ್ಡ ಬಸವ, ದ್ಯಾಮಣ್ಣ ತಳವಾರ, ಬಸವನಗೌಡ ಸೇರಿದಂತೆ ಯುವ ಮೋರ್ಚಾ ಘಟದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.