ವೇಟ್‌ಲಿಪ್ಟಿಂಗ್‌ದಲ್ಲಿ ಬಂಗಾರದ ಪದಕ ಪಡೆದ ವಿದ್ಯಾರ್ಥಿನಿ ಶೃತಿ
ತಾಳಿಕೋಟೆ 02: ಪಟ್ಟಣದ ಎಸ್.ಎಸ್ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಚ್.ಎಸ್.ಪಾಟೀಲ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ(ಬಿಪಿಎಡ್) ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಶೃತಿ ತುಪ್ಪದಗೆ ಭಾರ ಎತ್ತುವ(ವೇಟ್ ಲಿಪ್ಟಿಂಗ್) ಸ್ಪರ್ಧೆಯಲ್ಲಿ ಬಂಗಾರದ ಪದಕ ಲಭಿಸಿದೆ.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಫಸ್ಟ್ ಗ್ರೇಡ್ ಕಾನಸ್ಟಿಟ್ಯೂಟ ಕಾಲೇಜಿನಲ್ಲಿ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಪುರುಷ ಹಾಗೂ ಮಹಿಳೆಯರ ವೇಟಲಿಟಿಂಗ್ ಹಾಗೂ ದೇಹಾರ್ಢ ಸ್ಫರ್ಧೆಯಲ್ಲಿ ಭಾಗವಹಿಸಿದ ಪಟ್ಟಣದ ಎಚ್.ಎಸ್.ಪಾಟೀಲ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ 59 ಕೆಜಿ ವಿಭಾಗದಲ್ಲಿ 88 ಕೆಜಿ ಭಾರ ಎತ್ತುವ ಮೂಲಕ ಬಂಗಾರದ ಪದಕವನ್ನು ಮುಡಿಗೆರಿಸಿಕೊಂಡಿದ್ದಾಳೆ.
ವಿದ್ಯಾರ್ಥಿನಿ ಶೃತಿ ತುಪ್ಪದ ಅಂತರ ವಿಶ್ವ ವಿದ್ಯಾಲಯ ಮಟ್ಟದಲ್ಲಿ ನಡೆಯುವ ವೇಟ್‌ಲಿಪಿಟಂಗ್ ವಿಭಾಗಕ್ಕೆ ಆಯ್ಕೆಯಾಗುವದ ಮೂಲಕ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲ, ಕಾರ್ಯದರ್ಶಿ ಸಂತೋಷ ಪಾಟೀಲ, ಪ್ರಾಚಾರ್ಯ ಭೀಮಣ್ಣ ಅರಿಕೇರಿ. ಉಪನ್ಯಾಸಕರುಗಳಾದ ಶಿವು ನಾಯಕ್. ಎಂ.ಎಸ್.ರಾಯಗೊಂಡ, ಎಸ್.ಜಿ.ಧೋತ್ರೇ, ಅಮರೇಶ್ ನಾಗರಹಾಳ, ಎಸ್.ಬಿ.ಮಂಗ್ಯಾಳ ಸೇರಿದಂತೆ ಅಂಗಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಸ್ತ ಸಿಬ್ಬಂದಿಗಳು ಹಾಗೂ ತಾಳಿಕೋಟೆಯ ಸುತ್ತಮುತ್ತಲಿನ ಕ್ರೀಡಾ ಅಭಿಮಾನಿಗಳು ಹರ್ಷ ವ್ಯಕತಪಡಿಸಿದ್ದಾರೆ.