ರಾಣೆಬೆನ್ನೂರ

ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆ; ಹಳೆಯ ಪುಸ್ತಕ ಸಂಗ್ರಹ ಅಭಿಯಾನ

ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆ; ಹಳೆಯ ಪುಸ್ತಕ ಸಂಗ್ರಹ ಅಭಿಯಾನ

ರಾಣೀಬೆನ್ನೂರ 11: ನಗರದ ಯುವ ಕವಿ ಸಾಹಿತ್ಯ ಪರಿಚಾರಕ ಬಸವರಾಜ ಬಾಗೇವಾಡಿಮಠ ಅವರು ತಮ್ಮ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ವತಿಯಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ಓದಲು ಕೊಡುವ ದೃಷ್ಟಿಯಿಂದ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ.  

ಮನೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಪಠ್ಯ ಪುಸ್ತಕ, ಕಾದಂಬರಿ-ಕಥೆ-ಕವನ ಸಂಕಲನ ಲೇಖನಗಳ ಮಾಲಿಕೆ, ವಾರ-ಮಾಸ ಪತ್ರಿಕೆ, ಗ್ರಂಥಗಳು, ನಿಘಂಟುಗಳು ಸೇರಿದಂತೆ ಇತರೆ ಯಾವುದೇ ಜ್ಞಾನಾರ್ಜನೆ ಹೆಚ್ಚಿಸುವ ಪುಸ್ತಕಗಳಿರಲಿ ಅವುಗಳನ್ನು ರದ್ದಿಗೆ ಹಾಕದೇ ಮುಕ್ತವಾಗಿ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿರುವ ಪುಸ್ತಕ ಸಂಗ್ರಹ ಅಭಿಯಾನ ಜೋಳಿಗೆಗೆ ನೀಡಿ ಅವುಗಳ ಸದುಪಯೋಗಕ್ಕೆ ಸಹಕರಿಸಲು ಬಾಗೇವಾಡಿಮಠ ವಿನಮ್ರ ಮನವಿ ಮಾಡಿದ್ದಾರೆ.  

ಸಂಪರ್ಕತೆ: ಬಸವರಾಜ ಎಸ್‌. ಬಾಗೇವಾಡಿಮಠ ರಂಗನಾಥ ನಗರ ರಾಣೀಬೆನ್ನೂರ-581 115, ಹಾವೇರಿ ಜಿಲ್ಲೆ ಜಂಗಮವಾಣಿ: 9611381039 


ಸುದ್ದಿ ಓದಿ