ಶ್ರೀ ಸೇವಾಲಾಲ್ ಮಹಾರಾಜ ಜಯಂತಿ ಆಚರಣೆ
ರಾಣಿಬೆನ್ನೂರ 18: ಇಲ್ಲಿನ ಮಿನಿವಿಧಾನ ಸೌಧದ ಸಭಾಭವನದಲ್ಲಿ ಗುರುವಾರ ತಾಲೂಕಾ ಆಡಳಿತ ಮತ್ತು ಬಂಜಾರ ಸಮಾಜದ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜರವರ ಜಯಂತಿ ಆಚರಿಸಲಾಯಿತು.
ಜಯಂತೋತ್ಸವದಲ್ಲಿ ಬಂಜಾರ ಸಮಾಜದ ಮುಖಂಡ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯಕ ಅವರು, ಶ್ರೀ ಸೇವಾಲಾಲ್ ಮಹಾರಾಜರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಶ್ರೀ ಸೇವಾಲಾಲ್ ಮಹಾರಾಜರವರ ವೃತ್ತಿಯ ಮೂಲಕ ಪಶು ಸಾಕಣೆ ಹಾಗೂ ಸಂಗೋಪನೆ ಮಾಡುವ ವ್ಯಕ್ತಿ ಹಾಗೂ ಸಂಗೀತಗಾರ, ಧೈರ್ಯಶಾಲಿ ಯೋಧರಾಗಿದ್ದರು. ಇವರು ಅಲೆಮಾರಿಯಾಗಿದ್ದ ಜನಾಂಗವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು ದೇವರನ್ನು ಒಲಿಸಿಕೊಂಡು ತಮ್ಮ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಚಿಂತಕರಾಗಿದ್ದರು ಎಂದರು.
ತಹಶೀಲ್ದಾರಹನುಮಂತಪ್ಪ ಶಿರಹಟ್ಟಿ, ನಗರಸಭೆಯ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಮಾಜದ ಮುಖಂಡರಾದ ಮಾಲತೇಶ ಜಾಧವ, ರಮೇಶ ಲಮಾಣಿ, ತಾವರೆಪ್ಪ ಲಮಾಣಿ, ರಮೇಶ ಹಂಚಿನಮನಿ, ಬೀರ್ಪ ಲಮಾಣಿ, ಚಂದ್ರು ಲಮಾಣಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಇದ್ದರು.