ರಾಣೆಬೆನ್ನೂರ

ಸಡಗರದಿಂದ ಶ್ರೀರಾಮನವಮಿ ಆಚರಣೆ

ಸಡಗರದಿಂದ ಶ್ರೀರಾಮನವಮಿ ಆಚರಣೆ

ರಾಣಿಬೆನ್ನೂರು 11:  ತಾಲೂಕಿನಧ್ಯಂತ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶ್ರೀರಾಮನವಮಿಯನ್ನು ಸಡಗರ ಸಂಭ್ರಮದಿಂದ ಹಾಗೂ ಭಕ್ತಿಭಾವದಿಂದ ರವಿವಾರ ಆಚರಿಸಲಾಯಿತು. 

ಇಲ್ಲಿಯ ಮಾರುತಿ ನಗರದ ಶ್ರೀರಾಮ ಮಂದಿರದಲ್ಲಿ, ಕೋಟೆಯ ಶ್ರೀರಾಮ ಮಂದಿರದಲ್ಲಿ, ದೊಡ್ಡಪೇಟೆಯ ಶ್ರೀರಾಮ ಮಂದಿರದಲ್ಲಿ, ಸಂಗಂ ವೃತ್ತದ ಬಳಿ ಇರುವ ಶ್ರೀರಾಮ ಮಂದಿರದಲ್ಲಿ, ಈಶ್ವರನಗರದ ಅಚಿ್ಯುಪ್ಪಸ್ವಾಮಿ ದೇವಸ್ಥಾನದ ಆಂಜನೇಯ ಮಂದಿರದಲ್ಲಿ ಬೆಳಗ್ಗೆ 8 ಗಂಟೆಗೆ ಶ್ರೀರಾಮನಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನಡೆಯಿತು. ನಂತರ ನಡೆದ ತೊಟ್ಟಿಲೋತ್ಸವದಲ್ಲಿ ಮಹಿಳೆಯರು ರಾಮನ ನಾಮಕರಣ ಮಾಡಲಾಯಿತು. ನಗರದಲ್ಲಿ ಮಕ್ಕಳಿಂದ ಬಾಲ ರಾಮನ ವೇಷಭೂಷಣದಲ್ಲಿ ಕಂಡು ಬಂದಿತು.  

ಶ್ರೀ ರಾಮನ ಭಕ್ತರು ಕುಟುಂಬ ಸೇಮೇರಾಗಿ ಬೆಳಗ್ಗೆಯಿಂದಲೇ ರಾಮಮಂದಿರ ಹಾಗೂ ರಾಮನಭಂಟ ಹನುಮನ ದೇವಸ್ಥಾನಗಳಿಗೆ ತೆರಳಿ ವಿಷೇಶ ಪೂಜೆ ಹಾಗೂ ನೈವೇದ್ಯ ಸಲ್ಲಿಸುವ ಮೂಲಕ ಭಕ್ತಿ ಮೆರೆದರು. 

ತಾಲೂಕಿನ ತುಮ್ಮಿನಕಟ್ಟಿ, ಕಮದೋಡ, ಚಳಗೇರಿ, ಕುಮಾರಪಟ್ಟಣ, ಕರೂರು, ಮಾಕನೂರ, ನಾಗೇನಹಳ್ಳಿ, ಮುದೇನೂರ, ಹಲಗೇರಿ, ಮೇಡ್ಲೆರಿ, ಕುಪ್ಪೇಲೂರು, ಜೋಯಿಸರಹರಳಹಳ್ಳಿ, ಸುಣಕಲ್ಲಬಿದರಿ, ಅಸುಂಡಿ, ಹಿರೇಬಿದರಿ, ಕಾಕೋಳ, ದೇವರಗುಡ್ಡ, ಕೂನಬೇವು, ಚೌಡಯ್ಯದಾನಪುರ, ಚಿಕ್ಕಕುರುವತ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹನುಮನಿದ್ದಡೆ ರಾಮನಿರುವನು ಎಂಬ ನಂಬಿಕೆಯ ಆಧಾರದ ಮೇಲೆ ಶ್ರೀಆಂಜನೇಯ ದೇವಸ್ಥಾಹಗಳಿಗೆ ಜನರು ತೆರಳಿ ದೇವರ ದರ್ಶನ ಪಡೆದು ಸಡಗರ ಸಂಭ್ರಮದಿಂದ ರಾಮನವಮಿಯನ್ನು ಆಚರಿಸಿದರು. 


ಸುದ್ದಿ ಓದಿ