ರಾಣೆಬೆನ್ನೂರ

ಶತಮಾನೋತ್ಸವ ಸಂಭ್ರಮದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್

ಶತಮಾನೋತ್ಸವ ಸಂಭ್ರಮದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಬ್ಯಾಂಕ್

ರಾಣೀಬೆನ್ನೂರು 11:  ನಗರದ ಪ್ರತಿಷ್ಠಿತ ಬಸವೇಶ್ವರ ಅರ್ಬನ್ ಕೋ-ಆಫ್ ಬ್ಯಾಂಕ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು ಗ್ರಾಹಕರಿಂದ ಉತ್ತಮ ಜನಸ್ನೇಹಿ ಬ್ಯಾಂಕ್ ಎಂದು ಜನಮನ್ನಣೆ ಗಳಿಸಿದ್ದು ಪ್ರಸಕ್ತ ವರ್ಷ 1,27,27,278ರೂ.ಲಾಭ ಗಳಿಸಿ ದಾಖಲೆ ನಿರ್ಮಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಆರ್‌.ಅಸುಂಡಿ ಹೇಳಿದರು.  

ಅವರು ಬ್ಯಾಂಕ್ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬ್ಯಾಂಕ್ ಈ ಕುರಿತು  ಮಾತನಾಡಿದರು. ಶೇರು ಬಂಡವಾಳ-178.25ಲಕ್ಷ, ನಿಧಿಗಳು-1,107.84 ಲಕ್ಷ, ಠೇವಣಿಗಳು-4508,18ಲಕ್ಷ, ಸಾಲ-ಮುಂಗಡಗಳು-3585,35ಲಕ್ಷ, ವಾರ್ಷಿಕ ವಹಿವಾಟು-83,164-05ಲಕ್ಷ ಆದಾಹ ತೆರಿಗೆ ಪೂರ್ವದಲ್ಲಿ ಲಾಭ-202,32ಲಕ್ಷ ಗಳಿಸಿದೆ ಎಂದ ಅವರು ರಾಷ್ಟ್ರೀಕೃತ  ಬ್ಯಾಂಕಿನಲ್ಲಿ ಸಿಗುವ ಎಟಿಎಂ, ರೂಪೆ ಕಾರ್ಡ, ಇ-ಕಾಮರ್ಸ, ಪಿಓಎಸ್, ಯುಪಿಐ, ಮೊಬೈಲ್ ಬ್ಯಾಂಕಿಂಗ್, ಆರ್‌ಟಿಜಿಎಸ್ ಸೇವೆಯನ್ನು ಒದಗಿಸುತ್ತಿರುವ ಜಿಲ್ಲೆಯ ಪ್ರಥಮ ಸಹಕಾರಿ ಇದಾಗಿದೆ ಈ ಯಶಸ್ಸಿಗೆ ಕಾರಣೀಕರ್ತರಾದ ಬ್ಯಾಂಕಿನ ಆಡಳಿತ ಮಂಡಳಿಗೆ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಸದಾಕಾಲ ಕೃತಜ್ಞತೆಗಳನ್ನು ಸಲ್ಲಿಸುವವರಾಗಿದ್ದೇವೆ ಎಂದರು. 

ಮಾಧ್ಯಮ ಗೋಷ್ಠಿಯಲ್ಲಿ ಬ್ಯಾಂಕಿನ ಉಪಾದ್ಯಕ್ಷ ಶಿವಕುಮಾರ ನರಸಗೊಂಡರ, ನಿರ್ದೇಶಕರುಗಳಾದ ಪಿ.ಎಂ.ಗೌಳಿ, ಬಿ.ಸಿ.ತಾವರಗೊಂದಿ, ಎಸ್‌.ಜಿ.ಕಟಗಿಹಳ್ಳಿ, ವೀರೇಶ್ ಮೋಟಗಿ, ಎಸ್‌.ಎಸ್‌. ಸಾಲಗೇರಿ, ಮಂಜುನಾಥ ಓಲೇಕಾರ, ವ್ಯವಸ್ಥಾಪಕರಾದ ನಿರಂಜನ ಉದಾಸಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶಿವಕುಮಾರ ನರಸಗೊಂಡರ ಸ್ವಾಗತಿಸಿ, ಮಂಜುನಾಥ ಓಲೇಕಾರ ವಂದಿಸಿದರು. 


ಸುದ್ದಿ ಓದಿ