ಶ್ರಾವಣ: ಶಿರಹಟ್ಟಿ ಪಕೀರೇಶ್ವರರ ಮೃತ್ಯುಂಜಯ ಶ್ರೀಗಳಿಂದ ಪ್ರವಚನ
ಸವದತ್ತಿ 28: ಶ್ರಾವಣ ಮಾಸ ಪ್ರಾರಂಭದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಒಂದು ತಿಂಗಳು ಪೂರ್ಣ ಶಿರಹಟ್ಟಿ ಪಕೀರೇಶ್ವರರ ಕುರಿತು ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಪಟ್ಟಣದ ಸಮಸ್ತ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸುಗೊಳಿಸಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ಪ್ರವಚನ ಸಮಿತಿ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾಮನಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜು.29ರಿಂದ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಶಿರಹಟ್ಟಿ ಪಕೀರೇಶ್ವರರ ಪ್ರವಚನವನ್ನು ಹಮ್ಮಿಕೊಳ್ಳಲಾಗಿದ್ದು, ಗಂದಿಗವಾಡ ರಾಜಗುರು ಹಿರೇಮಠದ ಮೃತ್ಯುಂಜಯ ಮಹಾಸ್ವಾಮೀಜಿ ತಿಂಗಳ ಪೂರ್ತಿ ಪ್ರವಚನ ನೀಡಲಿದ್ದಾರೆ ಎಂದರು.
ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಗದೀಶ ಶಿಂತ್ರಿ, ಐ.ಪಿ.ಪಾಟೀಲ, ಬಿ.ವಿ.ಬಿ ನರಗುಂದ, ರಾಮಣ್ಣ ಬ್ಯಾಹಟ್ಟಿ ಉಪಸ್ಥಿತರಿದ್ದರು.
ಪ್ರವಚನ ಉದ್ಘಾಟನಾ ಕಾರ್ಯಕ್ರಮ
ಜು.29 ಸಂಜೆ 6ಕ್ಕೆ ಮಾಮನಿ ಕಲ್ಯಾಣ ಮಂಟಪದಲ್ಲಿ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಸ್ವಾದಿಮಠದ ಶಿವಬಸವ ಸ್ವಾಮೀಜಿ, ಕಲ್ಮಠದ ಶಿವಲಿಂಗ ಸ್ವಾಮೀಜಿ, ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೂಲಿಯ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನಿರ್ವಾಣೇಶ್ವರಮಠದ ಗುರುಮಹಾಂತ ಮಹಾಸ್ವಾಮೀಜಿ, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ದಂಡಪಾಣಿ ದೀಕ್ಷೀತರು, ಮನೋಹರ ಮಲ್ಹಾರ ದೀಕ್ಷಿತರು, ಪ್ರಸನ್ನ ದೀಕ್ಷಿತರು ಸಮ್ಮುಖವಹಿಸಲಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷರು ಹಾಗೂ ಸನ್ಮಾನ್ಯ ಶಾಸಕರಾದ ಆನಂದ ಚಂದ್ರಶೇಖರ ಮಾಮನಿಯವರು ಅಧ್ಯಕ್ಷತೆವಹಿಸಲಿದ್ದಾರೆ. ಪುರಸಭೆ ಅಧ್ಯಕ್ಷರಾದ ರಾಜಶೇಖರ ಕಾರದಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಿಎಲ್ಡಿ ಬ್ಯಾಂಕ ಅಧ್ಯಕ್ಷರಾದ ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಪುರಸಭೆ ಉಪಾಧ್ಯಕ್ಷರಾದ ದೀಪಕ ಜಾನ್ವೇಕರ ಸೇರಿದಂತೆ ಅನೇಕ ಗಣ್ಯರು ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸವದತ್ತಿ ತಾಲೂಕಿನ ಸದ್ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯರಾಗಬೇಕೆಂದು ಶ್ರಾವಣ ಮಾಸದ ಪ್ರವಚನ ಸಮಿತಿಯವರು ವಿನಂತಿಸಿದ್ದಾರೆ.