ದಿ. ಡಾ. ಎಸ್.ಬಿ.ಪಾಟೀಲರಿಗೆ ಶ್ರದ್ಧಾಂಜಲಿ ಅರ್ಪಣೆ
ಸಂಕೇಶ್ವರ 06: ಇತ್ತಿಚೇಗೆ ನಿಧನರಾದ “ರಾಷ್ಟ್ರ ಪ್ರಶಸ್ತಿ” ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಸಂಶೋಧಕ ಡಾ. ಎಸ್.ಬಿ.ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಹುಕ್ಕೇರಿ ತಾಲೂಕಾ ಘಟಕದ ವತಿಯಿಂದ ಸಭೆ ನಡೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಸಂಕೇಶ್ವರದ ಬಸವ ಮಂಟಪದಲ್ಲಿ ನಡೆದ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ “ರಾಷ್ಟ್ರ ಪ್ರಶಸ್ತಿ”ಪುರಸ್ಕೃತ ನಿವೃತ್ತ ಮುಖ್ಯಾಧ್ಯಾಪಕ ಹಾಗೂ ಸಂಘದ ತಾಲೂಕಾ ಘಟಕದ ಉಪಾಧ್ಯಕ್ಷ ಎಸ್.ಬಿ.ಹಿರೇಮಠ ಅವರು ಮಾತನಾಡಿ, ಡಾ. ಎಸ್.ಬಿ.ಪಾಟೀಲ ಅವರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಅಪೂರ್ವ ಸೇವೆಯನ್ನು ಸ್ಮರಿಸಿದರು. ಶಿಕ್ಷಕರಾಗಿ, ಸಾಹಿತಿಗಳಾಗಿ, ಸಂಶೋಧಕರಾಗಿ, ಸಮಾಜ ಸುಧಾರಕರಾಗಿ, ಬಸವ ಧರ್ಮದ ಪ್ರಸಾರಕರಾಗಿ ಅವರ ಸೇವೆ ಅಪಾರ. ಅವರು ಒಬ್ಬ ವ್ಯಕ್ತಿ ಅಲ್ಲ ಒಂದು ಶಕ್ತಿಯಾಗಿದ್ದರು ಎಂದು ಹೇಳಿದರು.
ಕಾರ್ಯಕಾರಿ ಸಮೀತಿಯ ಸದಸ್ಯ ಬಿ.ಎಂ.ಅಮ್ಮಣಗಿ ಅವರು ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಹಾಗೂ ದುಶ್ಚಟಗಳ ನಿರ್ಮೂಲನೆಗೆ ಡಾ. ಎಸ್.ಬಿ.ಪಾಟೀಲ ಅವರು ನಡೆಸಿದ ಜಾಗೃತಿ ಹಾಗು ಹೋರಾಟವನ್ನು ಪ್ರಶಂಶಿಸಿದರು. ಎಸ್.ಎಸ್.ಯಶವಂತ ಅವರು ಮಾತನಾಡಿ ಡಾ. ಪಾಟೀಲರಲ್ಲಿದ್ದ ಮಾನವೀಯ ಮೌಲ್ಯಗಳನ್ನು ಕೊಂಡಾಡಿದರು.
ಕಾರ್ಯದರ್ಶಿ ಬಿ.ಬಿ. ಘೋರೆ್ಡ ಅವರು ಮಾತನಾಡಿ, ತಾಲೂಕಾ ಘಟಕದ ಅಧ್ಯಕ್ಷರಾಗಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆ ನಿವಾರಣೆಗಾಗಿ ಡಾ. ಪಾಟೀಲ ಅವರ ಮಾನವವೀಯ ಸ್ಪಂದನೆ ಹಾಗು ಪಟ್ಟಪರಿಶ್ರಮ ವಿವರಿಸಿದರು. ಕಾರ್ಯಕಾರಿ ಸಮೀತಿಯ ಸದಸ್ಯ ಜಿ.ಎಸ್.ಮಠಪತಿ ಹಾಗೂ ಎಸ್.ಕೆ.ಸದಲಗಿ ಅವರು ಡಾ. ಎಸ್.ಬಿ.ಪಾಟೀಲ ಅವರ ಭಾವಚಿತ್ರದ ಪೂಜೆ ಹಾಗೂ ಭಾವಚಿತ್ರಕ್ಕೆ ಮಾಲಾರೆ್ಣ ನೆರವೇರಿಸಿದರು. ಸದಸ್ಯರಾದ ಎಸ್.ಆಯ್.ಹೊನ್ನಳ್ಳಿ, ಜಿ.ಎಸ್.ಗುರವ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಒಂದು ನಿಮಿಷದ ಮೌನವನ್ನು ಅಚರಿಸುವ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲಾಯಿತು.