ವೀರ ಯೋಧರಿಗೆ ಶ್ರದ್ಧಾಂಜಲಿ
ರಾಣಿಬೆನ್ನೂರ 15: ನಗರದ ಅಂಚೆ ವೃತ್ತದಲ್ಲಿ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ ಹೆಲಿಕ್ಯಾಪ್ಟರ್ ದುರಂತದಲ್ಲಿ ಮೃತರಾದ 13 ಜನ ವೀರ ಯೋಧರಿಗೆ ಮೇಣದ ಬತ್ತಿ ಹಚ್ಚಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಜಿ. ಹೊಟ್ಟೇಗೌಡ್ರ, ಸಂಸ್ಥೆಯ ಧರ್ಮದರ್ಶಿ ಕೆ.ಜಿ.ಮೋಹನ್, ಮಂಗಳಗೌರಿ ಪೂಜಾರ, ಯೋಗೇಶ ಭವಾನಿ ಶಂಕರ, ವಸಂತ ಹುಲ್ಲತ್ತಿ, ಸುಮಾ ಉಪ್ಪಿನ, ಗೀರೀಶ ಬುಡ್ಡನಗೌಡ್ರ ಹಾಗೂ ವಿಧ್ಯಾರ್ಥಿಗಳು ಇದ್ದರು.