ರಾಣೆಬೆನ್ನೂರ

ವಾಣಿಜ್ಯ ನಗರದಲ್ಲಿ ಸ್ವಾಕರವೆಯಿಂದ ಭಾವಪೂರ್ಣ ಶ್ರದ್ಧಾಂಜಲಿ

ವಾಣಿಜ್ಯ ನಗರದಲ್ಲಿ ಸ್ವಾಕರವೆಯಿಂದ ಭಾವಪೂರ್ಣ ಶ್ರದ್ಧಾಂಜಲಿ

ರಾಣೇಬೆನ್ನೂರು 31: ಶುಕ್ರವಾರ ನಿಧನರಾದ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತ ಪಡಿಸಿ ಪ್ರದಾನ ಅಂಚೆ ಕಛೇರಿ ಬಳಿ ಸ್ವಾಭಿಮಾನಿ ಕರ್ನಾಟಕ ರಕ್ಷನಾ ವೇದಿಕೆ ಬಾಪೂಜಿ ಯುವಕ ಸಂಘ ಮತ್ತು ಪುನೀತ್ ರಾಜ ಅವರ ಅಭಿಮಾನಿಗಳ ಸಂಘವು ಸಂಜೆ ಮೇಣದಬತ್ತಿ ದೀಪ ಬೆಳಗಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.  

ಕೋಟ್ರೆಶಪ್ಪ ಎಮ್ಮಿ, ಬಿ.ಕೆ. ರಾಜನಹಳ್ಳಿ, ನಿತ್ಯಾನಂದ ಕುಂದಾಪುರ, ಕೆ.ಎಸ್‌. ನಾಗರಾಜ, ಚಂದ್ರಶೇಖರ ಶೆಟ್ಟಿ, ರವಿ ಪವಾರ್, ಅಶೋಕ ಠಿಕಾರೆ, ಪಂಪಣ್ಣ ನಾಯಕ,  ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ