ಹೊಸಪೇಟೆ

ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ಹೊಸಪೇಟೆ (ವಿಜಯನಗರ) 30: ವಿಜಯನಗರ ಕ್ಷೇತ್ರದ ಶ್ಯಾನಭಾಗ್ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್‌.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ನಾಡಿನ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನ ತೀವ್ರ ಆಘಾತಕಾರಿಯಾಗಿದೆ. ಅವರ ಅಗಲಿಕೆಯಿಂದ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದರೂ ಪುನೀತ್ ರಾಜಕುಮಾರ ಹಮ್ಮು ಬಿಮ್ಮುಗಳಿಲ್ಲದೆ ಸರಳ ಸೌಜನ್ಯ ವ್ಯಕ್ತಿ. ತಮ್ಮ ತಂದೆ ಡಾ. ರಾಜಕುಮಾರ  ರಂತೆ ಸರಳತೆಯ ಸಾಕಾರ ಮೂರ್ತಿಯಾಗಿದ್ದರು, ಪುನೀತ್ ರಾಜಕುಮಾರ ಅಸ್ತಗಂತರಾಗಿದ್ದು, ಕನ್ನಡ ಚಿತ್ರರಂಗದ ಅಪರೂಪದ ಮರೆಯದ ಮಾಣಿಕ್ಯ ನಮ್ಮನ್ನು ಅಗಲಿದ್ದು , ಅವರ ಅತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೂ ಹಾಗೂ ಲಕ್ಷಾಂತರ ಅವರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೋರುತ್ತೇನೆಂದರು. 


ಸುದ್ದಿ ಓದಿ