ಶಿಗ್ಗಾವ್

‘ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೂ ಹಂಚುವ ಮನೋಭಾವ ಹೊಂದಬೇಕು’

‘ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೂ ಹಂಚುವ ಮನೋಭಾವ ಹೊಂದಬೇಕು’

ಶಿಗ್ಗಾವಿ 22:  ಮನುಷ್ಯ ತನಗಿಷ್ಟವಾದ ಸಂಪತ್ತನ್ನು ಗಳಿಸಬಹುದು. ಆದರೆ ಗಳಿಸಿದ ಸಂಪತ್ತಿನಲ್ಲಿ ಸಮಾಜಕ್ಕೂ ಹಂಚುವ ಮನೋಭಾವ ಹೊಂದಬೇಕು ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ತಾಲೂಕಿನ ಗಂಗೇಬಾವಿಯ ಕೆಎಸ್‌ಆರ್‌ಪಿ 10ನೇ ಪಡೆಯ ಆವರಣದಲ್ಲಿರುವ ಪೋಲಿಸ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋರೊನಾದಿಂದ ಚೇತರಿಸಿಕೊಂಡು ಬಂದ ಮೇಲೆ ಇಡುವದಕ್ಕಿಂತ ಕೊಟ್ಟು ಹೋಗುವದು ಒಳ್ಳೆಯದು ಎಂದು ತಿಳಿದುಕೊಂಡಿದ್ದೆನೆ, ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಉಚಿತ ನೊಟ್ ಬುಕ್ಕ ವಿತರಣೆ ಮಾಡುತ್ತಿದ್ದೆವೆ, ಅದೇ ರೀತಿ ತಾಲೂಕಿನ ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆನೆ ಎಂದರು. 

ಕೆಎಸ್‌ಆರ್‌ಪಿ 10ನೇ ಪಡೆದ ಕಮಾಂಡೆಂಟ್ ಟಿ ಸುಂದರ್‌ರಾಜು ಮಾತನಾಡಿ ಶಶಿಧರ ಯಲಿಗಾರ ಅವರು ನಮ್ಮ ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಸಹಾಯ ಮಾಡಿದ್ದಾರೆ, ಕೋವಿಡ್ ಸಮಯದಲ್ಲಿ ಆರೋಗ್ಯದೃಷ್ಟಿಯಿಂದ ನಮ್ಮ ಪೊಲೀಸ್‌ರಿಗೆ ಆರೋಗ್ಯ ಕೀಟ್  ನೀಡಿ ಸಹಾಯ ಮಾಡಿದ ಹೃದಯವಂತರು, ನಮ್ಮ ಪೊಲೀಸ್‌ರ ಮಕ್ಕಳು ಇಂಜನೀಯರು ಡಾಕ್ಟರು ಆಗಲಿ ಎಂದು ಸಿಬಿಎಸ್‌ಸಿ ಶಾಲೆಯನ್ನು ತೆರಯಲಾಗಿದೆ, ಈ ಶಾಲೆಯಿಂದ ನಮ್ಮಲ್ಲಿ ಪರಿವರ್ತನೆಯಾಗಿದೆ ಪ್ರತಿಯೊಬ್ಬರ ಮನೆಯಲ್ಲಿ ಇಂಜನೀಯರುಗಳು ಇದ್ದಾರೆ, ವಿದ್ಯೆಯ ಗುಣಮಟ್ಟ ಹೆಚ್ಚಿದೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿದ ಯಲಿಗಾರ ಅವರಿಗೆ ಕೃತಜ್ಞೆಗಳನ್ನು ಸಲ್ಲಿಸುತ್ತೆವೆ ಎಂದರು. 

ಹಿರಿಯ ವರದಿಗಾರರು ಹಾಗೂ ಸಂಪಾದಕರಾದ ಲೋಚನೇಶ ಹೂಗಾರ, ಹಾಗೂ ಕೆಎಸ್‌ಆರ್‌ಪಿ 10ನೇ ಅಧಿಕಾರಿಗಳು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ವತಿಯಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ