ಮಧ್ಯಪ್ರದೇಶದಲ್ಲಿ ಗೋ ಸಂಪುಟ: ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್, 18: ರಾಜ್ಯದಲ್ಲಿ ಜಾನುವಾರುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರಕಾರ ಗೋ ಸಂಪುಟ ರಚಿಸುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಪಶು ಸಂಗೋಪನೆ, ಅರಣ್ಯ, ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಹಾಗೂ ರೃತ ಕಲ್ಯಾಣ ಇಲಾಖೆಯನ್ನು ಗೋ ಸಂಪುಟದಲ್ಲಿ ಸೇರಿಸಲಾಗುವುದು. ಗೋ ಸಂಪುಟದ ಮೊದಲ ಸಭೆ ಇದೆ 22ರಂದು ನಡೆಯಲಿದೆ ಎಂದು ಚೌಹಾಣ್ ಹೇಳಿದ್ದಾರೆ.
ಆದರೂ ಸರಕಾರ ಇದರ ಬಗ್ಗೆ ಇರುವ ಅಧಿಕಾರ ಹಾಗೂ ಜವಾಬ್ದಾರಿಗಳ ಹೆಚ್ಚಿನ ವಿವರಗಳನ್ನು ಪ್ರಟಿಸಬೇಕಿದೆ.
ಲವ್ ಜಿಹಾದ್ ವಿರುದ್ಧ ಕಾನೂನು ತರಲು ರಾಜ್ಯ ಸರಕಾರ ಮುಂದಾಗಿದೆ ಎಂದು ಗೃಹ ಸಚಿವರು ಹೇಳಿದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.