19 ಗುರುವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಕುಷ್ಟಗಿ 17: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಂದಕೂರ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮೇ 19 ಗುರುವಾರ ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಕಂದಕೂರ ಗ್ರಾಮದ ನಾಗರಾಜ್ ಪಾಟೀಲ್ ಅವರ ವೇಮನ ಫಾರ್ಮ್ನಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ 600ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಅಧ್ಯಕ್ಷ ದೊಡ್ಡನಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.
ಬೆಳಗ್ಗೆ 7:00 ಗಂಟೆಗೆ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳ ನೃತ್ಯ ಹಾಗೂ ಸಕಲ ಮಂಗಳವಾದ್ಯ ವೈಭವಗಳನ್ನು ಕುಂಭಮೇಳ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಮತ್ತು ಮಹಾಯೋಗಿ ವೇಮನರ ಭಾವಚಿತ್ರದ ಮೆರವಣಿಗೆ ನೆರವೇರಲಿದೆ.
ಹರಿಹರ ತಾಲೂಕಿನ ಹೊಸಹಳ್ಳಿ ಸದ್ಭಾವನ ವಿದ್ಯಾಪೀಠದ ವೇಮಾನಂದ ಮಹಾ ಸ್ವಾಮಿಗಳು, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಚಳಗೇರಿಯ ವೀರ ಸಂಗಮೇಶ್ವರ ಶಿವಾಚಾರ್ಯರು, ನಿಡಶೇಸಿ ಪಂಶ್ಚಕಂತಿ ಹಿರೇಮಠದ ಚನ್ನಬಸವ ಶಿವಾಚಾರ್ಯ, ಎಂ. ಗುಡದೂರಿನ ನೀಲಕಂಠ ತಾತನವರು, ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯರು, ಬಿಜಕಲ್ ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ಕಾರ್ಯಕ್ರಮಗಳು ದಿವ್ಯ ಸಾನಿಧ್ಯವಹಿಸುವರು.
ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ದೊಡ್ಡನಗೌಡ ವೆಂಕಟೇಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಕಾರ್ಯಕ್ರಮ ಉದ್ಘಾಟಿಸುವರು.
ಇಳಕಲ್ಲಿನ ವಿಜಯಮಹಾಂತೇಶ ಕಲೆ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸುಮಂಗಲಾ ಮೇಟಿ ವಿಶೇಷವಾಗಿ ಉಪನ್ಯಾಸ ನೀಡುವರು. ಗದುಗಿನ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರಿಂದ ರಾತ್ರಿ 9:00 ಗಂಟೆಗೆ ಭವ್ಯ ವೇದಿಕೆಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯುತ್ತದೆ ಎಂದು ರೆಡ್ಡಿ ಸಮಾಜದ ಯುವ ಮುಖಂಡ ನಾಗರಾಜ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.