ಶ್ರೀಗುರು ಮಾರ್ಕಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ
ರಾಣೀಬೆನ್ನೂರ 28: ಇಲ್ಲಿ ನ ಶಿದ್ದೇಶ್ವರ ನಗರದ ಶ್ರೀ ಗುರು ಮಾರ್ಕಂಡೇಶ್ವರ ಯುವಕ ಹಾಗೂ ಭಕ್ತ ಮಂಡಳಿ ಆಶ್ರಯದಲ್ಲಿ ಮಾ 1 ರಂದು ಮಂಗಳವಾರ ಶಿವರಾತ್ರಿ ನಿಮಿತ್ಯ ಅಖಂಡ ಶಿವರಾತ್ರಿ ಜಾಗರಣೆಯ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಯುವಕ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗರಣೆ ನಿಮಿತ್ಯ ಅಂದು ಸ್ವಾಮಿಗೆ ಸಂಜೆ 4ರಂದು ಮಹಾ ರುದ್ರಾಭಿಷೇಕ ನಡೆಯಲಿದೆ. ರುದ್ರಾಭಿಷೇಕ ಮಾಡಿಸುವ ಭಕ್ತರು ಮುಂಚಿತವಾಗಿ ಹೆಸರು ನೊಂದಾಯಿಸಲು ಕೋರಿದ್ದಾರೆ. ಬುಧವಾರ ಮುಂಜಾನೆ ಸ್ವಾಮಿಗೆ ಮಹಾ ಪೂಜೆ, ಪಲ್ಲಕ್ಕಿ ಉತ್ಸವ, ಮೂರ್ತಿಯ ಮೆರವನಿಗೆಯು ಹಲವು ವಾದ್ಯ ಮೇಳಗಳೊಂದಿಗೆ ಪ್ರಮೂಖ ಬೀದಿಗಳಲ್ಲಿ ಸಂಚರಿಸಿ ಪುನ: ದೇವಸ್ಥಾನಕ್ಕೆ ಸಾಂಗ-ಮಂಗಲಗೊಳ್ಳುವುದು. ನಂತರ 12-30ಕ್ಕೆ ಸಾರ್ವಜನಿಕವಗಿ ಭಕ್ತರಿಗೆ ಮಹಾ ಪ್ರಸಾದ ವಿತರಣೆಯಾಗಲಿದ್ದು ಭಕ್ತರು, ಸಮಾಜ ಬಾಂಧವರು, ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಮಂಡಳಿಯು ಕೋರಿದೆ.