ಸಂವಿಧಾನವು ಇಂದಿನ ರಾಜಕಾರಣಿಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಕೈಗನ್ನಡಿ: ಶಿವಣ್ಣನವರ
ರಾಣೇಬೆನ್ನೂರು, ಡಿ.27: ಡಾ. ಬಿ.ಆರ್. ಅಂಬೇಡ್ಕರ ಅವರು ರಚಿಸಿದ ಸಂವಿಧಾನವು ಇಂದಿನ ರಾಜಕಾರಣಿಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಕೈಗನ್ನಡಿಯಾಗಿದೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ ಲೋಕಾರೆ್ಣಗೊಂಡ ಡಾ. ಬಿ.ಆರ್ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರೆ್ಣ ಸಲ್ಲಿಸಿ ನಂತರ ಸಭೀಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಸ್ತ ಭಾರತೀಯರಿಗೆ ಸಾರ್ವಭೌಮತ್ವವನ್ನು ಕಲ್ಪಿಸಿಕೊಟ್ಟು ಪ್ರತಿಯೊಬ್ಬ ನಾಗರೀಕರಿಗೆ ಸಾಮಾಜಿಕ ನ್ಯಾಯ, ಆರ್ಥಿಕ, ರಾಜಕೀಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಅವಕಾಶ ನೀಡಿದ ಮಹಾ ಮಾನವತಾವಾದಿಯಾಗಿದ್ದಾರೆ ಎಂದರು.
ದೇಶದ ಮುಂದಿನ ಪೀಳಿಗೆಯ ಭವಿಷ್ಯದ ನಾಯಕರೆನಿಸಕೊಂಡಿರುವ ಇಂದಿನ ಯುವಕರು ದುಶ್ಚಟಗಳ ದಾಸರಾಗಿರುವುದು ಖೇದಕರ ಸಂಗತಿಯಾಗಿದ್ದು ಅದು ಅವರ ಭವಿಷ್ಯಕ್ಕೆ ಮಾರಕ. ಅದನ್ನು ತ್ಯಜಿಸಿ ಸಚ್ಛಾರಿತ್ರ್ಯದಿಂದ ಜೀವನ ನಡೆಸಿರಿ ಎಂದು ಕರೆ ನೀಡಿದರು. ಇಂದಿನ ದಿನಮಾನಗಲ್ಲಿ ಅಸ್ಪೃಶ್ಯತೆ ಇನ್ನೂ ತಾಂಡವವಾಡುತ್ತಿದ್ದು ಇದನ್ನು ಬೇರು ಸಹಿತ ಕಿತ್ತೊಗೆಯಬೇಕೆಂದರೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರೊಂದಿಗೆ ಪೋಷಕರು ಮಕ್ಕಳಲ್ಲಿ ದೇಶಭಕ್ತಿ ಮೂಡಿಸಿ ದೇಶಾಭಿಮಾನದ ಜೊತೆಗೆ ಭಾಷಾಭಿಮಾನವನ್ನು ಬೆಳೆಸಬೇಕು. ಕನ್ನಡನಾಡು, ನುಡಿ, ಜಲ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕು ಕರ್ತವ್ಯವನ್ನು ಪಡೆಯಲು ನಿರಂತರವಾಗಿ ಹೋರಾಡಿದಾಗ ಮಾತ್ರ ನಾವು ಸಮಾಜದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಭಲತೆ ಸಾಧಿಸಲು ಸಾಧ್ಯ ಎಂದರು. ಗ್ರಾ.ಪಂ ಸದಸ್ಯ ಮಂಜಣ್ಣ ಆನ್ವೇರಿ, ಮುಖಂಡ ಎಮ್.ಬಿ. ಅಸುಂಡಿ, ಕರಬಸಪ್ಪ ಕಿವುಡಣ್ಣನವರ, ಸಿದ್ದಪ್ಪ ಪೂಜಾರ, ಎಸ್.ಎಮ್. ಮಲ್ಲನಗೌಡ್ರ, ಬಸಯ್ಯ ಕೆರೂಡಿಮಠ, ಗಣೇಶ ಹಳ್ಳಿಗುಡಿ, ಶಂಕರಣ್ಣ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು. ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ ಡಾ. ಅಂಬೇಡ್ಕರ ಅವರ ಪುತ್ಥಳಿಗೆ ಮಾಜಿ ಸಚಿವ ಬಸವರಾಜ ಶಿವಣ್ಣನವರ ಗೌರವ ಸಲ್ಲಿಸಿದರು.