ಶಿವಕುಮಾರಗೆ ಅಭಿನಂದನಾ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರ: ನ 12 ಹಾವೇರಿ ಜಿಲ್ಲಾ ಕೇಂಧ್ರದಲ್ಲಿ ಇತ್ತಿಚೇಗೆ ನಡೆದ 66ನೇ ಕನ್ನಡ ರಾಜ್ಯೋತ್ಸವ ಆಚರಣಾ ಸಮಾರಂಭದಲ್ಲಿ ನಾಡಿನ ಪ್ರತಿಷ್ಠಿತ ಅಂದ, ಅಂಗ ವಿಕಲ, ಕೀವುಡ ಮತ್ತು ಮೂಕ ಮಕ್ಕಳ ಸೇವಾ ಸಂಸ್ಥೆ ಎಂದು ಗುರುತಿಸಿಕೂಂಡಿರುವ ಸೇವಾ ಅಂದರ ಸಂಸ್ಥೆಯ ಶ್ರೀ ರೇಣುಕಾ ಎಲ್ಲಮ್ಮ ಕೀವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಅಧ್ಯಕ್ಷರಾದ ಹೆಚ್.ಆರ್. ಶಿವಕುಮಾರ ಅವರ ಸಾಮಾಜಿಕ ಮತ್ತು ವಿಶೇಷ ಮಕ್ಕಳ ಸೇವಾ ಸಾಧನೆ ಗುರುತಿಸಿ ಜಿಲ್ಲಾಡಳಿತದ ಪರವಾಗಿ ಅವರನ್ನು ಸನ್ಮಾನಿಸಿ, ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಬಿ.ಸಿ. ಪಾಟೀಲ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಸಂಜಯ್ ಶಟ್ಟಣ್ಣನವರ, ಅಫರ ಜಿಲ್ಲಾಧಿಕಾರಿ ಡಾಽಽಎನ್. ತಿಪ್ಪೇಸ್ವಾಮಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹ್ಮದ್ ರೋಶನ್, ಪೋಲೀಸ್ ವರಿಷ್ಠಾಧಿಕಾರಿ ಹನುಮಂತರಾಯ್, ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕಾ ಆಚರಣಾ ಸಮಿತಿಯ ಗಣ್ಯರು ಉಪಸ್ಥಿತರಿದ್ದರು.