ಚಿಕ್ಕೋಡಿ

ಓಟದ ಸ್ಪರ್ಧೆಯಲ್ಲಿ ಶಿವಕ್ಕ ಸಾಧನೆ: ಸನ್ಮಾನ

ಓಟದ ಸ್ಪರ್ಧೆಯಲ್ಲಿ ಶಿವಕ್ಕ ಸಾಧನೆ: ಸನ್ಮಾನ

ಚಿಕ್ಕೋಡಿ 08: ತಾಲೂಕಿನ ನವಲಿಹಾಳ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಿವಕ್ಕ ಹೆಗಡೆ ಇತಳು ರಾಜ್ಯ ಮಟ್ಟದ ಅಥ್ಲೇಟಿಕ್ ವಿಭಾಗದ 1500 ಮೀಟರ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತುರಿನಲ್ಲಿ ನಡೆದ ಪ್ರೌಢ ಶಾಲೆಗಳ ಅಥ್ಲೇಟಿಕ್ ಸ್ಪರ್ಧೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಪಾಲ್ಗೊಂಡ ನವಲಿಹಾಳ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಿವಕ್ಕ ಹೆಗಡೆ 1500 ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಶೈಕ್ಷಣಿಕ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಮುಖ್ಯೋಪಾಧ್ಯಾಯ ಸಂಜು ಹುಲ್ಲೋಳಿ ಸಂತಸ ವ್ಯಕ್ತಪಡಿಸಿದರು. 

ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಿದರು. 


ಸುದ್ದಿ ಓದಿ