ಸಂಕೇಶ್ವರ

ಶಿವಾಜಿ ಸ್ಮಾರಕ ಅಡಿಗಲ್ಲು ಸಮಾರಂಭ

ಶಿವಾಜಿ ಸ್ಮಾರಕ ಅಡಿಗಲ್ಲು ಸಮಾರಂಭ

ಸಂಕೇಶ್ವರ 05: ಇತ್ತೀಚಿಗೆ ಶಿವಾಜಿ ಸ್ಮಾರಕ ಅಡಿಗಲ್ಲು ಸಮಾರಂಭವು ಬಸ್‌ಸ್ಟ್ಯಾಂಡ್ ಹತ್ತಿರದ ಲಿಂಕ್‌ರೋಡ್‌ದಲ್ಲಿ ಜರುಗಿತು. ಅಡಿಗಲ್ಲು ಸಮಾರಂಭವನ್ನು ಕರ್ನಾಟಕ ಸರಕಾರದ ಅರಣ್ಯ ಮತ್ತು ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ ಕತ್ತಿ ಇವರು ನೆರವೇರಿಸಿದರು.  ಈ ಅಡಿಗಲ್ಲು ಸಮಾರಂಭದ ಹೋಮ ಹವನ ಕಾರ್ಯದಲ್ಲಿ ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರೆ ಮತ್ತು ಅವರ ಪತಿ ಬಂಡು ಬಾಳಕೃಷ್ಣ ಹತನೂರೆ ಇವರು ಭಾಗವಹಿಸಿದ್ದರು. ಡಾ.ಟಿ.ಎಸ್‌.ನೇಸರಿ, ಮಾಜಿ ನಗರಾಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮರ ಮಧುಕರ ನಲವಡೆ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ