ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರಭಕ್ತ ಆಡಳಿತಗಾರರಿಗೆ ಪ್ರೇರಣೆ
ಲೋಕದರ್ಶನ ವರದಿ
ರಾಣಿಬೆನ್ನೂರ 21: ಹಿಂದೂ ಹೃದಯ ಸಾಮ್ರಾಟ, ಪ್ರಜಾ ರಕ್ಷಕ, ಸರ್ವ ಮಹಿಳೆಯನ್ನು ತಾಯಿಯಂತೆ ಕಂಡ ಛತ್ರಪತಿ ಶಿವಾಜಿ ಮಹಾರಾಜರು. ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.
ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಶನಿವಾರ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಅವರ ಪುತ್ತಳಿಗೆ ಮಾಲಾರೆ್ಣ ಸಲ್ಲಿಸಿ ಮಾತನಾಡಿದ ಅವರು. ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ರಾಷ್ಟ್ರಭಕ್ತ ಆಡಳಿತಗಾರರಿಗೆ ಪ್ರೇರಣೆಯಾಗಿದೆ, ಇಂತಹ ಮಹಾನ್ ವ್ಯಕ್ತಿಯ ತತ್ವ-ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆಗೆ ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಅರುಣಕುಮಾರ ಪೂಜಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಮಾತನಾಡಿದರು. ಗ್ರಾಪಂ ಅಧ್ಯಕ್ಷ ನಿಂಗಪ್ಪ ವಗ್ಗನವರ, ಉಪಾಧ್ಯಕ್ಷೆ ಮಾಲತಾ ವಡ್ಡರ, ರಾಜು ಸೂರ್ವೆ, ಯಶವಂತರಾವ ಸೂರ್ವೆ, ಅಶೋಕ ಬಸನಗೌಡರ, ಶೈಲಜಾ ಮೆಳ್ಳಿ, ಮಹಾದೇವ ತಳವಾರ, ರಾಜು ಹಲವಾಗಲ, ರಾಜು ನಾಗರಜ್ಜಿ, ನಂದಿತಾ ಮಠದ, ರೇಣುಕಾ ಕೊಪ್ಪದ ಸ್ಭೆರಿದಂತೆ ಇತರರು ಇದ್ದರು.