ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣಿಬೆನ್ನೂರ 21: ಶಿವಾಜಿ ಮಹಾರಾಜರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದವರು, ಹಿಂದೂಸ್ತಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದವರು. ಅವರ ಸನ್ಮಾರ್ಗವನ್ನು ಸರ್ವರೂ ಅನುಸರಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ದೊಡ್ಡಪೇಟೆಯ ತುಕ್ಕಾಭವಾನಿ ದೇವಸ್ಥಾನದಲ್ಲಿ ಶನಿವಾರ ತಾಲೂಕಾ ಕ್ಷತ್ರೀಯ ಶಿವಾಜಿ ಮರಾಠ ಸಮಾಜದ ವತಿಯಿಂದ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಶಿವಾಜಿ ಮಹಾರಾಜರ ಶೌರ‌್ಯ, ಸಾಹಸ, ರಾಷ್ಟ್ರಭಕ್ತ ಆಡಳಿತಗಾರರಿಗೆ ಪ್ರೇರಣೆಯಾಗಿದೆ ಎಂದರು.
ಇಂತಹ ಮಹಾನ್ ವ್ಯಕ್ತಿಯ ತತ್ವ-ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆಗೆ ಅಳವಡಿಸಿಕೊಳ್ಳಬೇಕು. ಸ್ಥಳೀಯ ತುಕ್ಕಾ ಭವಾನಿ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 25ಲಕ್ಷ ಅನುದಾನ ನೀಡಿದೆ. ಸಮಾಜದವರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರು ವಿವಿಧ ಹೂಗಳಿಂದ ಶೃಂಗರಿಸಿದ ತೊಟ್ಟಿಲಿನಲ್ಲಿ ಬಾಲ ಶಿವಾಜಿ ಭಾವಚಿತ್ರವಿರಿಸಿ ನಾಮಕರಣ ಮಾಡಿ ಜೋಗುಳ ಹಾಡಿ ತೊಟ್ಟಿಲು ತೂಗಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಮರಾಠ ಸಮಾಜದ ತಾಲೂಕಾಧ್ಯಕ್ಷ ಪವಿತ್ರಕುಮಾರ ನಾಗೇನಹಳ್ಳಿ, ಶಿವಮೂರ್ತಿ ದಿಲ್ಲಿವಾಲ, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ ಪವಾರ, ಬಿ.ಕೆ. ರಾಜನಹಳ್ಳಿ, ಉದಯ ಗಾವಡೆ, ಶಿವಾನಂದ ಆರೇರ, ಶಿವಾಜಿರಾವ್ ಮರಾಠೆ, ಪರಶುರಾಮ ಕಾಳೇರ, ಅನಿಲ ಸಿಂಧೆ, ಸುಭಾಷ ಸೂರ್ಯವಂಶಿ, ಮಾರುತಿ ಜಾಧವ್, ಶಿವಾಜಿರಾವ್ ಮಾಕನೂರು, ನರಸಿಂಹ ಮರಾಠೆ, ಮಾಲತೇಶ ತೋಟೆಕರ, ಕಾಶಿಬಾಯಿ ಮಾದಾಪುರ, ಸುಷ್ಮಾ ಗಾವಡೆ, ವಿನೋಧಾಬಾಯಿ ಜಾಧವ, ಗಿರಿಜಾ ಚವ್ಹಾಣ, ಜ್ಯೋತಿ ನಾಗೇನಹಳ್ಳಿ, ಪುಷ್ಪಾ ಮಾದಾಪುರ, ಶಶಿಕಲಾ ಮಾದಪುರ, ಇಂದಿರಾಭಾಯಿ ಸಿಂಧೆ, ಶೈಲಾ ಮಾಕನೂರು, ಲತಾ ಅಂಗಡಿ, ಶಶಿಕಲಾ ಆರೇರ, ಕಾವೇರಿ ದಿಲ್ಲಿವಾಲ್, ಕಮಲಾಬಾಯಿ ಜಾಧವ, ಮಮತಾ ಜಾಧವ ಸೇರಿದಂತೆ ಮತ್ತಿತರರಿದ್ದರು.