22 ರಿಂದ ರವಿವಾರ ದಿನ 28ರ ವರೆಗೆ ವೀರಭದ್ರ ದೇವರ ಶಿವ ಸಪ್ತಹ ಕಾರ್ಯಕ್ರಮ
ಮಾಂಜರಿ 27: ಪವಿತ್ರವಾದ ದಕ್ಷಿಣ ಕಾಶಿ ಎಂದು ಪ್ರಖ್ಯಾತ ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ವೀರಭದ್ರ ದೇವರ ಶಿವ ಸಪ್ತಹವನ್ನು ಸೋಮವಾರ ದಿನಾಂಕ 22 ರಿಂದ ರವಿವಾರ ದಿನ 28ರ ವರೆಗೆ ನಡೆಯಲಿದ್ದು ಸದರಿ ಶಿವ ಸಪ್ತಾಹವನ್ನು ಮತ್ತು ಶ್ರೀಶೈಲ್ ಪೀಠದ ಜಗದ್ಗುರುಗಳ ಮೌನಾನುಷ್ಠಾನ ಕಾರ್ಯಕ್ರಮವನ್ನು ಶ್ರೀಶೈಲ ಪೀಠದ ಜಗದ್ಗುರುಗಳಾದ ಹಾಗೂ ಯಡೂರಿನ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿಗಳಾದ ಡಾ ಚಂದ್ರ ಸಿದ್ದರಾಮಯ್ಯ ಪಂಡಿತರಾದ ಶಿವಾಚಾರ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ಅದೇ ಪ್ರಕಾರ ಲಿಂಗೈಕ್ಯ ಶ್ರೀಗಳ ಸಮಾಧಿಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ರವಿವಾರ ದಿನಾಂಕ 21 ರಂದು ಸದರಿ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಶ್ರೀ ಶಿವ ಸಪ್ತಾಹ ಮಂಡಲ ಹಾಗೂ ಶ್ರೀ ವೀರಭದ್ರ ದೇವ ಕಾಡದೇವರ ಮಠದ ಆಯೋಜಕರಿಂದ ಪ್ರಕಟಣೆಯ ಮೂಲಕ ತಿಳಿಸಲಾಗಿದೆ ಸೋಮವಾರ ದಿನ 22ರಂದು ಸಾಯಂಕಾಲ 6:00ಗೆ ಸದರಿ ಶಿವ ಸಪ್ತಾಹ ಉದ್ಘಾಟನಾ ಸಮಾರಂಭವನ್ನು ಶ್ರೀಶೈಲ್ ಪೀಠದ ಜಗದ್ಗುರುಗಳ ದಿವ್ಯಸಾಂತ್ಯದಲ್ಲಿ ಹಿರೇಮಠ ಬನಹಟ್ಟಿಯ ಶರಣಬಸವ ಶಿವಾಚಾರ್ಯ ಸ್ವಾಮೀಜಿಗಳು ಉದ್ಘಾಟಿಲಿತ್ತು ಸೂಗೂರೇಶ್ವರ ಸಂಸ್ಥಾನ ಮಠ ನೂಲಿನ ಗುರು ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಡಿಗಣಿಯ ಚಕ್ರವರ್ತಿ ಇದ್ದಾನೆಶ್ವರ ಸ್ವಾಮೀಜಿಗಳು ಅಮೃತೇಶ್ವರ ಮಠ ಬೈಂದೂರಿನ ಅಮೃತೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ನಡೆಯಲಿದೆ ಪ್ರತಿದಿನ ಅಖಂಡ ಶಿವಣ್ಣ ಮತ್ತು ಸ್ಮರಣೆ ಶಿವ ಭಜನೆ ಶ್ರೀ ಶಿವ ಜ್ಞಾನ ವೇದಿಕೆ ಮೇಲೆ ಪ್ರವಚನ ಕೀರ್ತನ ಭಜನಾ ಸೇರಿದಂತೆ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹವ್ಯಾತವಾಗಿ ನಡೆಯಲಿದ್ದು ಪ್ರಥಮ ಮತ್ತು ಕೊನೆಯ ದಿನ ಮುಂಜಾನೆ 11 ಗಂಟೆಗೆ ಬೆಳೆಯ ಪಲ್ಲಕ್ಕಿಯಲ್ಲಿ ಶ್ರೀ ಶಿವನ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ ಶುಭ ಸಪ್ತಾಹ ಸಮಾರೋಪ ಸಮಾರಂಭವನ್ನು ಶ್ರೀಶೈಲ್ ಪೀಠದ ಜಗದ್ಗುರುಗಳ ಸಾಹಿತ್ಯದಲ್ಲಿ ಅಂಬಿಕಾ ನಗರದ ಈಶ್ವರ್ ಪಂಡಿತರಾದ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಹಾವು ರಾಜ್ಯಸಭೆಯ ಮಾಜಿ ಸದಸ್ಯ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಮಾಜಿ ಸಚಿವ ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಮಾಜಿ ಸಚಿವೆ ಹಾಗೂ ಶಾಸಕರಾದ ಶಶಿಕಲಾ ಜೊಲ್ಲೆ ಚಿಕ್ಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಮಾಜಿ ಸಂಸದ ಅನ್ನಾಸಾಹೇಬ್ ಜೊಲ್ಲೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಇವರ ಪ್ರಮುಖ ಉಪಸ್ಥಿತಿಯಲ್ಲಿ ಸಮಾರೋ ಸಮಾರಂಭ ನಡೆಯಲಿದೆ
ಗುರುವಾರ ದಿನಾಂಕ ಎರಡರಂದು ರಾಜ್ಯದ ಸಚಿವರಾದ ಸುರೇಶ್ ಕಡೆ ಹಾಗೂ ಶಿರೋಳದ ಶಾಸಕ ಮಾಜಿ ಸಚಿವ ರಾಜೇಂದ್ರ ಪಾಟೀಲ್ ಇವರ ಪ್ರಮುಖ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.