ಶಿವಚಿದಂಬರ ಸ್ವಾಮೀಜಿಯವರ ತೊಟ್ಟಿಲೋತ್ಸವ
ಧಾರವಾಡ 11: ಇಲ್ಲಿಯ ಶುಕ್ರವಾರ ಪೇಟೆಯ ತಾರಕೇಶ್ವರ ದೇವಸ್ಥಾನದಲ್ಲಿ ಶಿವಚಿದಂಬರ ಉತ್ಸವ ಹಾಗೂ ಕಾರ್ತೀಕ ಮಾಸದ ಪ್ರಯುಕ್ತ ಚಿದಂಬರ ಸ್ವಾಮೀಜಿಯವರ ತೊಟ್ಟಿಲೋತ್ಸವವನ್ನು ತಾರಕೇಶ್ವರ ಭಜನಾ ಮಂಡಳಿಯ ಎಲ್ಲ ಸದಸ್ಯರು ಸೇರಿಕೊಂಡು ಸಂಭ್ರಮದಿಂದ ಆಚರಿಸಿದರು.