ಅಂಚೆ ಸಪ್ತಾಹ: ಅಂಚೆ ಸೇವೆಯ ಮಹತ್ವ ಸಾರಿದ ಗಣ್ಯರು
ಧಾರವಾಡ 22 : ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದ ಸರ್ವತೋಮುಖ ಸೇವೆ ಮಾಡುತ್ತಿರುವುದು ಭಾರತೀಯ ಅಂಚೆ ಇಲಾಖೆ. ಯಾವ ತಾಂತ್ರಿಕ ಸೌಲಭ್ಯಗಳಿಲ್ಲದ ಸಕಾಲದಲ್ಲಿ ಬರಿಗಾಲಲ್ಲಿ ನಡೆದು ಹಳ್ಳಿಹಳ್ಳಿಗೆ ಮನೆಮನೆಗೆ ಅಂಚೆ ಅಣ್ಣ ಬಂದು ಓಲೆ, ತಂತಿ ಸಂದೇಶಗಳನ್ನೂ ಮುಟ್ಟಿಸುತ್ತಿದ್ದನು ನಾವು ಮರೆಯುವಂತಿಲ್ಲ ಎಂದು ಸಾಹಿತಿ, ಮತ್ತು ಪೋಸ್ಟ್ ಫೋರಂ ಸದಸ್ಯ ಕೆ.ಎಚ್.ನಾಯಕ ಹೇಳಿದರು.
ಧಾರವಾಡದ ಕಿತ್ತೂರು ಚನ್ನಮ್ಮ ಪೋಸ್ಟ್ ಆಫೀಸಿನಲ್ಲಿ ಆಯೋಜಿಸಿದ್ದ ಅಂಚೆ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನ್ನಾಡುತ್ತಿದ್ದರು.
ಇಂದು ಹೊಸ ಯುಗಕ್ಕೆ ತಕ್ಕಂತೆ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಾಮಾಣಿಕ ಸೇವೆ ಸಾರ್ವಜನಿಕರಿಗೆತ ನೀಡುತ್ತಿರುವುದು ಶ್ಲಾಘನೀಯಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ವಿಜಯ ಕುಮಾರ ಕುಂಟೋಜಿ ಮಾತನಾಡುತ್ತಾ ಜಾಗತಿಕ ಅಂಚೆ ದಿನವನ್ನು ಅಕ್ಟೋಬರ್ 9 ರಿಂದ 15 ರ ವರೆಗೆದೇಶದಾದ್ಯಂತ ಆಚರಿಸುತ್ತಿದ್ದು, ಸ್ಟಾಂಪ್ ಕ್ರೂಢೀಕರಣ,
ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ತಂತ್ರಜಾನ್ ಉನ್ನತೀಕರಣ ಕುರಿತು ಜನಸಾಮಾನ್ಯರು ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಅಂಚೆ ಇಲಾಖೆಯ ಭರವಸೆಯ ಸೇವೆಯನ್ನು ಜನರು ವಿಶ್ವಾಸದಿಂದ ಪಡೆಯಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪೋಸ್ಟ್ ಫೋರಂ ಸದಸ್ಯರಾದ ಕೆ.ಆರ್.ಶೆಟ್ಟಿ, ಮಹಾದೇವ ದೊಡಮನಿ, ನಿವೃತ್ತ ಅಂಚೆ ಅಧಿಕಾರಿಅಯ್. ಪಿ. ಗಂಭೀರಸೇರಿದಂತೆ ಅಂಚೆ ಇಲಾಖೆ ಸಿಬ್ಬಂದಿ ಮತ್ತುಗ್ರಾಹಕರು ಉಪಸ್ತಿತರಿದ್ದರು.