ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸಾಧನೆ; ಶೇ.100ಅ ರಷ್ಟು ಫಲಿತಾಂಶ..!
ಲೋಕದರ್ಶನ ವರದಿ
ಕಾಗವಾಡ 23: ತಾಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100ಅ ಫಲಿತಾಂಶ ಪಡೆದುಕೊಂಡಿದೆ. ಒಟ್ಟು 43 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಎಲ್ಲ 43 ವಿದ್ಯಾರ್ಥಿಗಳು ಪಾಸಾಗಿದ್ದು, ಇದರಲ್ಲಿ ನಿಸರ್ಗಾ ಭರತೇಶ ಖಾನಾಪೂರೆ ಶೇ. 98.40ಅ (615/625) ಅಂಕಗಳೊಂದಿಗೆ ತಾಲೂಕಿಗೆ ತೃತೀಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಅದರಂತೆ ಕೋಮಲ ಮಹಾತ್ಮಾ ಮಾನೆ ಶೇ. 97.76ಅ (611/625) ಮತ್ತು ಸಮರ್ಥ ಸಂಜಯ ಕಳಾಸ್ಕರ 97.44ಅ (609/625) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಸಾಧನೆ ಮಾಡಿರುವ ಎಲ್ಲ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿರುತ್ತಾರೆ.