ಶಿಗ್ಗಾವ್

ಶಿಗ್ಗಾವಿ: ತಾಲೂಕ ಮಟ್ಟದ ಸಭೆ

ಶಿಗ್ಗಾವಿ: ತಾಲೂಕ ಮಟ್ಟದ ಸಭೆ

ಶಿಗ್ಗಾವಿ 04:  ತಾಲೂಕಿನ ಗ್ರಾಮ ಪಂಚಾಯತಿ ನೌಕರರ ಸಂಘದ ಪದಾಧಿಕಾರಿಗಳು ತಾಲೂಕಿನ ಎಲ್ಲಾ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುತ್ತಾ ಸಂಘಟನೆಯ್ನ ಬಲಪಡಿಸಿರಿ ಎಂದು ಕರ್ನಾಟಕ ರಾಜ್ಯಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು) ರಾಜ್ಯಉಪಾಧ್ಯಕ್ಷ ಬಿ ಐ ಈಳಗೇರ ಹೇಳಿದರು. 

ಪಟ್ಟಣದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯಗ್ರಾಮ ಪಂಚಾಯತಿ ನೌಕರರ ತಾಲೂಕ ಮಟ್ಟದ ಸಭೆಯಲ್ಲಿ ನೂತನ ತಾಲೂಘಟಕದ ಪದಾಧಿಕಾರಿಗಳಿಗೆ ಶುಭಕೋರಿ ಅವರು ಮಾತನಾಡಿದ ಅವರು ಜಿಲ್ಲಾ ಹಾಗೂ ರಾಜ್ಯ ಸಮಿತಿ ತಿಳಿಸಿದ ಎಲ್ಲಾ ಜವಾಬ್ದಾರಿಗಳನ್ನು ತಾಲೂಕಿನ ಎಲ್ಲಾ ನೌಕರರೊಂದಿಗೆ ಸೇರಿ ನಿಭಾಯಿಸಿರಿ. ತಾಲೂಕಿನ ಗ್ರಾಪಂ ನೌಕರರು ನೂತನ ತಾಲೂಕ ಘಟಕದ ಪದಾಧಿಕಾರಿಗಳನ್ನು ಹೊರತು ಪಡಿಸಿ ಇತರೆ ಯಾರಿಗೂ ಹಾಗೂ ಯಾವುದೇ ಸದಸ್ಯತ್ವಇತರೆ ವಂತಿಕೆಯನ್ನು ನೀಡದೇ ತಮ್ಮ ಸಮಸ್ಯೆಗಳು ಇದ್ದರೆ ನೂತನ ಘಟಕದೊಂದಿಗೆ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಿರಿ ಎಂದರು. 

ಶಿಗ್ಗಾವಿ ತಾಲೂಕಗ್ರಾಮ ಪಂಚಾಯತ್ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶೇಖಪ್ಪ ಮಹದೇವಪ್ಪ ಯಲಿವಾಳ (ಬಿದರಿ),ಕಾರ್ಯದರ್ಶಿರವಿ ರಾಮಪ್ಪ ದೊಡ್ಡಮನಿ, ಉಪಾಧ್ಯಕ್ಷ ಪುಟ್ಟಪ್ಪಗದಿಗೆಪ್ಪ ತಳವಾರ, ಖಜಾಂಚಿ ಮಾರ್ತಂಡಪ್ಪ ನಿಂಗಪ್ಪ ಬಾಲಪ್ಪನವರ, ಸದಸ್ಯರಾದ ಶೇಖಪ್ಪ ಬಸಪ್ಪ ಗುಳೇದ,ಶಿವಣ್ಣ ಬಡ್ನಿ, ರಾಕೇಶ ಮಾದರ, ಹನಮಂತಪ್ಪ ಮಾಳಾಪುರ, ಗುಡ್ಡಪ್ಪಸಿದ್ದಣ್ಣವರ, ನಿಂಗಪ್ಪ ಮುಸರಿ, ಗಂಗಪ್ಪ ಕುರಬರ, ಬಸವರಾಜ ಅಂಗಡಿ, ಪರಶುರಾಮ ಚೊಟಪ್ಪನವರ, ಗೀರೀಶ ಮಲ್ಲೂರ, ನಾಗರಾಜ ಯಲ್ಲಪ್ಪ ಕಡೆಮನಿ, ಬಸಪ್ಪ ನಾಗಪ್ಪ ದೇವಿಹಾಳ, ಅಣ್ಣಪ ಛಲವಾದಿ ಅವರು ಸಭೆಯಲ್ಲಿ ಆಯ್ಕೆಯಾದರು. ನೂತನ ಘಟಕದ ಪದಾಧಿಕಾರಿಗಳನ್ನು ಶುಭಕೋರಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಂದಾನೆಪ್ಪ ಹೆಬಸೂರ, ಕಾರ್ಯದರ್ಶಿ ಜಗದೀಶಕೋಟಿ, ಖಜಾಂಚಿ ಸುಭಾಸ ಸೊಟ್ಟಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ