ರೈತರಿಗೆ ಸಿಹಿ ಹಂಚಿ ಡಾ. ವಿಶ್ವನಾಥ ಪಾಟೀಲ ಯುಗಾದಿ ಹಬ್ಬ ಆಚರಣೆ
ಬೈಲಹೊಂಗಲ 12: ಕಾಡಾ ಅಧ್ಯಕ್ಷರು, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ರವರು ಸಾವಯವ ರೈತರಿಗೆ ಸಿಹಿ ಹಂಚುವ ಮೂಲಕ ಯುಗಾದಿ ಹಬ್ಬವನ್ನು ಭಾನುವಾರ ಆಚರಿಸಿದರು. ಪುರಸಭಾ ಸದಸ್ಯರು ವಾಣಿ ಪತ್ತಾರ ಸಾವಯವ ಸಂತೆ ಸಂಘಟಕ ರಾದ ವಿಜಯ ಪತ್ತಾರ, ನವಗ್ರಹ ವಾಟಿಕಾ ಅಧ್ಯಕ್ಷ ಬಸವರಾಜ ಗದಗ, ಉಪಾಧ್ಯಕ್ಷ ಮಲ್ಲೇಶ, ಯರಗುದ್ದಿ, ಎಸ್.ವಿ.ತೋರಗಲ್ಲಮಠ, ಡಿ.ಎನ್. ಸಾಲಿಮಠ, ಸಾವಯವ ಸಂತೆಯ ಕಾರ್ಯದರ್ಶಿ ಶಿವಕುಮಾರ್ ಪಾಟೀಲ, ಸಾವಯವ ರೈತ ಬಾಬು ಪಾಟೀಲ, ರಾಜೇಶ ಹೆಬಸೂರ, ಅಶೋಕ ಗದಗ, ಮಹಾಬಲೇಶ್ವರ ವಾಲಿ ಇನ್ನೀತರರು ಭಾಗವಹಿಸಿದ್ದರು. ಎಲ್ಲರೂ ಯುಗಾದಿ ಹಬ್ಬದ ಶುಭಾಶಯ ವಿನಿಮಯ ಮಾಡಿದರು.