ರಾಣೆಬೆನ್ನೂರ

ಶಾರದಾ ವಿದ್ಯಾನಿಕೇತನ ಶಾಲೆ: 66ನೇ ಕನ್ನಡ ರಾಜ್ಯೋತ್ಸವ

ಶಾರದಾ ವಿದ್ಯಾನಿಕೇತನ ಶಾಲೆ: 66ನೇ ಕನ್ನಡ ರಾಜ್ಯೋತ್ಸವ

ಲೋಕದರ್ಶನ ವರದಿ 

ರಾಣೇಬೆನ್ನೂರು 04: ಇಲ್ಲಿನ ರಾಜರಾಜೇಶ್ವರಿ ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಇತ್ತಿಚೇಗೆ 66ನೇ ಕನ್ನುುುಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷೆ ಸೌಮ್ಯಶ್ರೀ ಕೆ.ಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹಾದೇವ್ ಕೆ.ಜಿ, ಸೌಂದರ್ಯ ಕೆ.ಜೆ. ದಿನೇಶ್ ಹೆಚ್‌.ಆರ್ ಮುಖ್ಯ ಶಿಕ್ಷಕಿ ವಂದನಾ ಬಾನಾವಳಿಕರ ಶಿಕ್ಷಕರಾದ ಚೈತ್ರಾ ಜಿ ಪಾಟೀಲ್, ಚೈತ್ರಾ ಮತ್ತಿತರ ಗಣ್ಯರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 


ರಾಜ್ಯೋತ್ಸವದ ನಿಮಿತ್ತ ಶಾಲಾ ಮಕ್ಕಳು ಕನ್ನಡಾಂಬೆ, ಕಿತ್ತೂರು ರಾಣಿಚೆನ್ನಮ್ಮ, ವನಕೆಓಭವ್ವ, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರರು ಮತ್ತಿತರ ದಾರ್ಶನಿಕರು ಸಾದು ಸಂತರು ವೇಷ ಭೂಷಣಗಳ ರೂಪಕದಲ್ಲಿ  ಸಾರ್ವಜನಿಕರ ಗಮನ ಸೆಳೆದರು. ಮತ್ತು ಕನ್ನಡ ನಾಡು, ನುಡಿ, ಸಂಸ್ಕ್ರತಿಯ ಸಾಂಸ್ಕ್ರತಿಕ ಗೀತೆಗಳ ಮೂಲಕ ತಮ್ಮ ಪ್ರತಿಭೆ ಮೇರೆದರು. 


ಸುದ್ದಿ ಓದಿ