ರಾಣೆಬೆನ್ನೂರ

ಶಾರದಾ ವಿದ್ಯಾನಿಕೇತನ ಶಾಲೆ : ಮಹಾತ್ಮ ಗಾಂಧಿ ಜಯಂತಿ

ಶಾರದಾ ವಿದ್ಯಾನಿಕೇತನ ಶಾಲೆ : ಮಹಾತ್ಮ ಗಾಂಧಿ ಜಯಂತಿ

ಲೋಕದರ್ಶನ ವರದಿ 


ರಾಣೇಬೆನ್ನೂರು: ಇಲ್ಲಿನ ರಾಜರಾಜೇಶ್ವರಿ ನಗರದ ಶಾರದಾ ವಿದ್ಯಾನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ರಾಷ್ತ್ರಪಿತ ಮಹಾತ್ಮ ಗಾಂದೀಜೀ ಅವರ 152 ನೇ ಮತ್ತು ಲಾಲ್ ಬಹದ್ದೂರ ಶಾಸ್ತ್ರಿಜೀ ಅವರ ಜಯಂತೋತ್ಸವ ಕಾರ್ಯಕ್ರಮವು ಸರಳವಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಸೌಮ್ಯಶ್ರೀ ಕೆ ಜೆ, ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಗಾಂಧೀಜಿಯವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದವರಾಗಿದ್ದಾರೆ. ಅಹಿಂಸೆಯ ಅಸ್ತ್ರ ಹಿಡಿದು ರಾಷ್ತ್ರವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವು ತಮ್ಮ ಸರಳ ಬದುಕನ್ನು ಮುಂದುವರೆಸಿದ ಮಹಾನ್ ಚೇತನ ಅವರಾಗಿದ್ದರು. ಅವರು ಇಂದು ನಮ್ಮ ಮದ್ಯ ಬೌತಿಕವಾಗಿ ಇರದೆ ಇದ್ದರೂ ಸಹ ಅವರುಗಳು ದೇಶದ  ಮಾದರಿ ನಾಯಕರುಗಳಾಗಿದ್ದಾರೆ ಎಂದರು  

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ವಂದನಾ ಬಾನಾವಳಿಕರ, ಶಿಕ್ಷಕರಾದ  ಚೈತ್ರಾ  ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ