ಶರಣಪ್ಪ ಎಚ್.ಬಡಿಗೇರ-ಶಿವಕುಮಾರ ಎಸ್.ಬಡಿಗೇರ ಆಯ್ಕೆ
ಕುಷ್ಟಗಿ 15: ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಮಯದಾಯ ಭವನ ಕುಷ್ಟಗಿಯಲ್ಲಿ ತಾಲೂಕಾ ವಿಶ್ವಕರ್ಮ ಸಮಾಜದ ಸಭೆ ನಡೆಯಿತು. ಸಭೆಯಲ್ಲಿ ಸೆ.17 ರಂದು ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಕರ್ನಾಟಕ ಘನ ಸರಕಾರವು ಆಚರಿಸುತ್ತಿದ್ದು ಇದರಲ್ಲಿ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಯಿತು.
ಸಭೆಯಲ್ಲಿ ಕುಷ್ಟಗಿ ತಾಲೂಕಾ ವಿಶ್ವಕರ್ಮ ಸಮಾಜದ ಈಗಿರುವ ಅಧ್ಯಕ್ಷರ ಹಾಗೂ ಉಳಿದ ಪದಾಧಿಕಾರಿಗಳ ಹಾಗೂ ಕುಷ್ಟಗಿ ನಗರ ವಿಶ್ವಕರ್ಮ ಸಮಾಜದ ಅಧ್ಯಕ್ಷರ ಹಾಗೂ ಉಳಿದ ಪದಾಧಿಕಾರಿಗಳ ಅವಧಿ ಮುಗಿದ ಕಾರಣ ನೂತನವಾಗಿ ಕುಷ್ಟಗಿ ತಾಲೂಕಾ ವಿಶ್ವಕರ್ಮ ಸಮಾಜಕ್ಕೆ ಶರಣಪ್ಪ ಎಚ್.ಬಡಿಗೇರ ಕುಷ್ಟಗಿ ಇವರನ್ನು ನಿಯೋಜಿತ ಅಧ್ಯಕ್ಷರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾಲೂಕಾ ವಿಶ್ವಕರ್ಮ ಸಮಾಜದ ಯುವಕ ಸಂಘಕ್ಕೆ ಶಿವಕುಮಾರ ಎಸ್.ಬಡಿಗೇರ ಕುಷ್ಟಗಿ ಇವರನ್ನು ನಿಯೋಜಿತ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವಿಶ್ವಕರ್ಮ ಸಮಾಜಕ್ಕೆ ಸಿದ್ದಪ್ಪ ಜಿ.ಬಡಿಗೇರ ಇವರನ್ನು ಮರು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಮುಂದುವರೆಯುವಂತೆ ಆಯ್ಕೆ ಮಾಡಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಸಮಾಜದ ಹಾಲಿ ಅಧ್ಯಕ್ಷರಾದ ಗುರ್ಪ ಎಂ.ಬಡಿಗೇರ ಕುಷ್ಟಗಿ ಅಧ್ಯಕ್ಷತೆವಹಿಸಿದ್ದರು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ಈಶಪ್ಪ ವಿ.ಬಡಿಗೇರ ಅಧ್ಯಕ್ಷರು ಜಿಲ್ಲಾ ವಿಶ್ವಕರ್ಮ ಸಮಾಜ ಉಮ್ಮಣ್ಣ ಬಡಿಗೇರ ಅಧ್ಯಕ್ಷರು ಮೌನೇಶ್ವರ ದೇವಸ್ಥಾನ ಸಮಿತಿ ತಾವರಗೇರಾ, ಮೌನೇಶ ಸೋನಾರ ಅಧ್ಯಕ್ಷರು ವಿಶ್ವಕರ್ಮ ಸಮಾಜ ಹನಮಸಾಗರ, ನೀಲಕಂಠಪ್ಪ ಬಡಿಗೇರ ಹಾಗೂ ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.