ಕುಷ್ಟಗಿ

ಶಾರದಾ ಶೆಟ್ಟರ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ: ವಿರೇಶ

ಶಾರದಾ ಶೆಟ್ಟರ್ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ: ವಿರೇಶ

ಕುಷ್ಟಗಿ 30: ದೀನ ದಲಿತರ ಹಾಗೂ ನಿರ್ಗತಿಕರಿಗೆ ಸಾಂತ್ವಾನದ ನುಡಿ ಹಾಗೂ ಸಹಾಯ ಹಸ್ತವನ್ನು ನೀಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಕಸಪಾ ಅಧ್ಯಕ್ಷ ವಿರೇಶ ಬಂಗಾರಶೆಟ್ಟರ್ ಹೇಳಿದರು.  

ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶಾರದಾ ಶೆಟ್ಟರ್ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ಇಲ್ಲಿನ ರೇಣುಕಾಚಾರ್ಯ ಮಂಗಲ ಭವನದಲ್ಲಿ ಏರಿ​‍್ಡಸಿದ್ದ ಪಟ್ಟಣದ ವೈದ್ಯರು, ವಿವಿಧ ಸಂಘ ಸಂಸ್ಥೆಗಳು, ಪತ್ರಕರ್ತರು, ಇನ್ನರ್ ವೀಲ್ ಕ್ಲಬ್‌ನ ಪದಾಧಿಕಾರಿಗಳಿಗೆ ಧನ್ಯವಾದ ಅರ​‍್ಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇನ್ನರ್ ವೀಲ್ ಕ್ಲಬ್‌ನ ಒಂದು ವರ್ಷದ ಅವಧಿಯಲ್ಲಿ ಅವರು ಅಸಹಾಯಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಹತ್ತು ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.  

ಸಾಂಸ್ಕೃತಿಕ ಸಾಹಿತ್ಯದ ಕಾರ್ಯಚಟುವಟಿಕೆಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಿರಿಯ ನಾಗರಿಕರಿಗೆ ಗೌರವಿಸಿದ್ದಾರೆ. ಸಸಿಗಳನ್ನು ನೀಡುವದು ಪರಿಸರ ರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳು ಒದಗಿಸಿದ್ದು ಎಸ್‌. ಎಸ್‌. ಎಲ್‌.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಿದ್ದಾರೆ. ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿರುವ ಶಾರದಾ ಶೆಟ್ಟರ್ ಅವರ ಸೇವೆಯ ಕೋನೆಯ ದಿನವಾದ ಇಂದು ಅವರ ಸೇವೆಯನ್ನು ಶ್ಲಾಘನೀಯ ವೆಂದು ಪ್ರಶಂಸೆ ಮಾಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ್ , ರವಿಂದ್ರ ಬಾಕಳೆ , ಬಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ್ , ಕಾರ್ಯದರ್ಶಿ ಮಹೇಶ ಹಡಪದ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದರು.  

ಇನ್ನರ್ ವೀಲ್ ಕಾರ್ಯಕ್ರಮ ನೆಡಯಲು ಸಹಕಾರ ನೀಡಿದ ಕ್ಲಬ್ ನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಪತ್ರಕರ್ತರಿಗೆ ಉಡುಗೊರೆ ನೀಡಿ ಸತ್ಕಾರ ಮಾಡಿದರು.  

ಈ ಸಂದರ್ಭದಲ್ಲಿ ಲತಾ ಕುರ್ಮಾಚಾರ, ಸವಿತಾ ಮಾಳಗಿ, ಡಾ.ಪಿ.ಎಮ್ ಪಾರ್ವತಿ, ಪ್ರಭಾ ಬಂಗಾರ ಶೆಟ್ಟರ್,  ಗಿರಿಜಾ ಚಿನಿವಾಲರ, ವಂದನಾ ಗೋಗಿ,  ಶಶಿಕಲಾ ಕುಡತನಿ, ಶಿಲ್ಪಾ ಸುಂಕದ, ಅಶ್ವಿನಿ ಪಾಟೀಲ್, ಉಮಾ ಅಕ್ಕಿ, ವಿಜಯ ಶ್ರೀ ಸೇರಿದಂತೆ ಇನ್ನರವೀಲ್ ಕ್ಲಬ್ ನ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಶಾರದಾ ಶೆಟ್ಟರ್ ಅವರಿಗೆ ಇನ್ನರವೀಲ್ ಕ್ಲಬ್‌ನ ಸರ್ವ ಪದಾಧಿಕಾರಿಗಳು ಅಭಿನಂದಿಸಿದರು. ಶಾರದಾ ಶೆಟ್ಟರ್ ಮಾತನಾಡಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷರಾದ ಮೇಲೆ ನನಗೆ ಸಲಹೆ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣಿಕರ್ತರಾದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಮಾಧ್ಯಮದ ಪ್ರತಿನಿಧಿ ಗಳ ಸಹಾಯ ಸರಕಾರಕ್ಕೆ ಚಿರ ಋಣಿ ಎಂದು ಹೇಳಿದ ಅವರು ಸಮಾಜದ ಸೇವೆಗೆ ಅವಕಾಶ ಕಲ್ಪಸಿದ ಇನ್ನರ್ ವಿಲ್ ಕ್ಲಬ್ ಜಿಲ್ಲಾ ಪದಾಧಿಕಾರಿಗಳ ಸಹಕಾರ ಕೂಡಾ ಸ್ಮರಿಸಿದರು. 


ಸುದ್ದಿ ಓದಿ