ಸಂಕೇಶ್ವರ

ಶಾಂತಿ ಸಭೆ: 12 ರಂದು ರಂಗಪಂಚಮಿ, ಧೂಳವಾಡ

ಶಾಂತಿ ಸಭೆ: 12 ರಂದು ರಂಗಪಂಚಮಿ, ಧೂಳವಾಡ

ಸಂಕೇಶ್ವರ 05: ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಸಂಕೇಶ್ವರ ಸಿಪಿಐ ಪ್ರಲ್ಹಾದ ಚನ್ನಿಗಿರಿ, ಇವರು ಹೋಳಿ ಹಬ್ಬದ ಆಚರಣೆ ಪ್ರಯುಕ್ತ ಮುಂಜಾಗ್ರತೆ ಶಾಂತಿ ಸಭೆಯನ್ನು ಕರೆಯಲಾಗಿತ್ತು.  

ರವಿವಾರ ದಿ. 12ರಂದು ರಂಗಪಂಚಮಿ ಹಾಗೂ ಧೂಳವಾಡ ಶಾಂತರೀತಿಯಿಂದ ಆಚರಿಸಬೇಕು. ಯುವಕರು ಮೋಟರ್ ಬೈಕ ಮೇಲೆ ಮೂರು ಜನರನ್ನು ಕರೆದುಕೊಂಡು ತಿರುಗಾಡಬಾರದು. ಬೇರೆ ಯುವಕರಿಗೆ ಚೀನಾ ಬಣ್ಣವನ್ನು ಎರಚಬಾರದು. ಇದರಿಂದ ಕಣ್ಣಿಗೆ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಆದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯುದಂತೆ ಜಾಗೃತೆ ವಹಿಸಬೇಕೆಂದು ಸಿಪಿಐ ಪ್ರಲ್ಹಾದ ಚನ್ನಿಗಿರಿ ಇವರು ಶಾಂತತಾ ಸಭೆಯಲ್ಲಿ ಹೇಳಿದರು. ಮತ್ತು ವಿದ್ಯಾರ್ಥಿಗಳು ರವಿವಾರ ಬಿಡುವು ಇರುವುದರಿಂದ ಪರೀಕ್ಷೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು. 

ಪುರಸಭೆಯ ಮಾಜಿ ಅಧ್ಯಕ್ಷ ಅಮರ ನಲವಡೆಯವರು ಹೋಳಿ ಹುಣ್ಣಿಮೆ ಹಾಗೂ ರಂಗಪಂಚಮಿಯನ್ನು ಶಾಂತರೀತಿಯಿಂದ ಆಚರಣೆ ಮಾಡಬೇಕೆಂದು ನಗರದ ಜನತೆ ಹಾಗೂ ಯುವಕರಲ್ಲಿ ಮನವಿ ಮಾಡಿಕೊಂಡರು. 

 ಸಭೆಯಲ್ಲಿ ನಗರದ ಗಣ್ಯ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಶಂಕರರಾವ ಹೆಗಡೆ, ಸುನೀಲ ಪರ್ವತರಾವ, ನಂದು ಮುಡಸಿ, ಸಂಜಯ ಶಿರಕೋಳಿ, ಜೀತೆಂದ್ರ ಮರಡಿ, ಹಾಗೂ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ