ಅಥಣಿ

ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಇಡೀ ವಿಶ್ವಕ್ಕೆ ಮಾದರಿ: ಬಂಟೋಡಕರ

ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಇಡೀ ವಿಶ್ವಕ್ಕೆ ಮಾದರಿ: ಬಂಟೋಡಕರ

ಅಥಣಿ 12: ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮಾದರಿ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಉಮೇಶರಾವ ಬಂಟೋಡಕರ ಹೇಳಿದರು.  

ಅವರು ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  

ಹಿಂದು ಧರ್ಮ ಸಂಕಷ್ಟಕ್ಕೀಡಾದಾಗ 8 ನೇ ಶತಮಾನದಲ್ಲಿಯೇ ಶಂಕರಾಚಾರ್ಯರು ಇಡೀ ದೇಶವನ್ನು ಹಲವು ಬಾರಿ ಸುತ್ತಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದು ಧರ್ಮಕ್ಕೆ ಭದ್ರ ಬುನಾದಿ ಹಾಕಿ ಗಟ್ಟಿಗೊಳಿಸಿದರು ಎಂದ ಅವರು ಈಗಲೂ ಕೂಡ ಹಿಂದು ಧರ್ಮಕ್ಕೆ ಕೆಲ ಧರ್ಮ ವಿರೋಧಿಗಳಿಂದ ಅಪಾಯ ಎದುರಾಗುತ್ತಿದ್ದು, ನಾವೆಲ್ಲ ಶಂಕರಾಚಾರ್ಯರು ಬೋಧಿಸಿದ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅವುಗಳನ್ನು ಆಚರಿಸುವ ಮೂಲಕ ಹಿಂದು ಧರ್ಮವನ್ನು ಗಟ್ಟಿಗೊಳಿಸಬೇಕಿದೆ ಎಂದರು.  

ಬ್ರಾಹ್ಮಣ ಸಮಾಜದ ಯುವ ಧುರೀಣ ರಾಮೇಶ ದಿಕ್ಷೀತ ಮಾತನಾಡಿ, ಆದಿ ಶಂಕರಾಚಾರ್ಯರು 8 ನೇ ಶತಮಾನದಲ್ಲಿ ಇಂದಿನ ಕೇರಳದ ಪೂರ್ಣಾ ನದಿ ದಡದಲ್ಲಿರುವ ಕಾಲಡಿಯಲ್ಲಿ ಅವತರಿಸಿದರು. 32 ವರ್ಷ ಬದುಕಿದ್ದ ಶಂಕರಾಚಾರ್ಯರು ಅನೇಕ ಧರ್ಮ ಗ್ರಂಥಗಳನ್ನು, ಪುರಾಣಗಳನ್ನು, ಬಾಷ್ಯಗಳನ್ನು ಬರೆದು ಹಿಂದು ಧರ್ಮಕ್ಕೆ ಮಾರ್ಗದರ್ಶನ ಮಾಡಿದರು ಎಂದ ಅವರು ಅಂದು ಆಚಾರ್ಯರು ಬೋಧಿಸಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದರು.  

ಬ್ರಾಹ್ಮಣ ಸಮಾಜ ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀರಾಮ ಕಟ್ಟಿ, ಬ್ರಾಹ್ಮಣ ಸಮಾಜದ ಧುರೀಣರಾದ ಸಚಿನ್ ಕುಲಕರ್ಣಿ, ಸುನೀಲ ತಬಿಬ, ಪ್ರಸಾದ ಕುಲಕರ್ಣಿ, ಗೀರೀಶ ಕುಲಕರ್ಣಿ, ಸಂಜೀವ ದೇಶಪಾಂಡೆ, ರಾಜು ಸಿದ್ಧಾಂತಿ, ಶ್ರೀನಿವಾಸ ಜೋಶಿ, ಆರ್‌.ಎ.ಮುತಾಲಿಕ ದೇಸಾಯಿ,  ಪುಟ್ಟು ದೇಶಪಾಂಡೆ ಸೇರಿದಂತೆ ತಾಲೂಕಾ ಆಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ