ರಾಷ್ಟ್ರೀಯ

ಜರ್ಸಿ' ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆಯಲಿರುವ ಶಾಹಿದ್

ಜರ್ಸಿ' ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆಯಲಿರುವ ಶಾಹಿದ್

ಮುಂಬೈ, ಅಕ್ಟೋಬರ್.6: ಬಾಲಿವುಡ್ ಕಬೀರ್ ಸಿಂಗ್ ಚಿತ್ರ ಖ್ಯಾತಿಯ ನಟ ಶಾಹಿದ್ ಕಪೂರ್, ತಮ್ಮ ಮುಂಬರುವ ಜರ್ಸಿ ಚಿತ್ರಕ್ಕಾಗಿ ಕಡಿಮೆ ಸಂಭಾವನೆ ಪಡೆಯಲಿದ್ದಾರಂತೆ.

ಕೊರೊನಾದಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣಗಳು, ಇದೀಗ ಪುನಃ ಆರಂಭಗೊಂಡಿವೆ. ಕೊರೊನಾ ನಿಯಂತ್ರಣದ ಹಿತದೃಷ್ಟಿಯಿಂದ ಚಿತ್ರೀಕರಣದಲ್ಲಿ ಚಿತ್ರ ನಿರ್ಮಾಪಕರು ಹೆಚ್ಚು ವ್ಯಯಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿಯೇ ಶಾಹಿದ್, ಜರ್ಸಿ ಚಿತ್ರಕ್ಕಾಗಿ  ಸಂಭಾವನೆ ಕಡಿಮೆ  ಪಡೆದುಕೊಳ್ಳುತ್ತಿದ್ದಾರಂತೆ.

ಈ ಚಿತ್ರಕ್ಕಾಗಿ ಶಾಹಿದ್ ಬರೊಬ್ಬರಿ 33 ಕೋಟಿ ರೂ.ಒಪ್ಪಂದ ಮಾಡಿಕೊಂಡಿದ್ದರು. ಆದರೀಗ 25 ಕೋಟಿ ರೂ. ತೆಗೆದುಕೊಳ್ಳಲು ನಿರ್ಧರಿಸಿದ್ದಾರಂತೆ.

ತೆಲುಗು ಚಿತ್ರ ಅರ್ಜುನ್ ರೆಡ್ಡಿ ರಿಮೇಕ್‌ 'ಕಬೀರ್ ಸಿಂಗ್' ಹಿಟ್ ಆದ ನಂತರ ಶಾಹಿದ್ ಮತ್ತೊಂದು ತೆಲುಗು ಸಿನಿಮಾ 'ಜರ್ಸಿ'ಯನ್ನು ಹಿಂದಿಗೆ  ರಿಮೇಕ್ ಮಾಡಲು ಒಪ್ಪಿಕೊಂಡಿದ್ದಾರೆ. ಶಾಹಿದ್, ಕ್ರಿಕೆಟಿಗನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಸುದ್ದಿ ಓದಿ