ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 16: ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯಕ್ಕೆ ಸೇವಾಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೆಟ್ಟಿಲಾಯಿತು. ಅಂತಹ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರರು ಭಾಗವಹಿಸದೇ ಇರುವುದು ದುರದೃಷ್ಟಕರ ಎಂದು ಪ್ರೊ. ಶಶಿಕಾಂತ ರಾಠೋಡ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ನಡೆದ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹರಪ್ಪ ನಾಗರೀಕತೆಯಿಂದ ಬೆಳೆದು ಬಂದ ಬಂಜಾರರು ಸಾವಿರಾರು ವರ್ಷಗಳ ಗ್ರಾಮ, ನಗರ ಜೀವನಗಳಿಂದ ದೂರವಿದ್ದು ಅರಣ್ಯದಲ್ಲಿ ಬೆಳೆದು ಈಗ ತಾಂಡಾಗಳಲ್ಲಿ ಜೀವಿಸುತ್ತಿದ್ದಾರೆ, ಈ ಸಮುದಾಯದವರು ಕೇವಲ ಅವರ ಜಯಂತಿ ಆಚರಣೆ ಮಾಡಿದರೆ ಸಾಲದು ಆ ಮಹಾತ್ಮರ ಆದರ್ಶ ಗುಣಗಳನ್ನ ಅಳವಡಿಸಿಕೊಳ್ಳಬೇಕಿದೆ ಎಂದರು.
ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಶರಣರ ನೀತಿ ಪಾಠಗಳನ್ನ ಪ್ರತಿನಿತ್ಯ ಹಮ್ಮಿಕೊಳ್ಳುವುದಿಲ್ಲ, ಹಮ್ಮಿಕೊಂಡಾಗ ಭಾಗವಹಿಸುವಿಕೆ ಬಹಳ ಮುಖ್ಯ, ಆದರೆ ಅಧಿಕಾರಿಗಳು ಭಾಗವಹಿಸುವಿಕೆ ಆಗಿಲ್ಲ, ಇದನ್ನ ಸಂಭಂದಿಸಿದ ಅಧಿಕಾರಿಗಳ ಗಮನಕ್ಕೆ ತರಲು ಇಚ್ಚಿಸುತ್ತೇನೆ ಕಾಯಕದ ಮೂಲಕ ಜನರಿಗೆ ನೀತಿ ಪಾಠ ಮಾಡಿದ ಶರಣರ ಜಯಂತಿ ಅರ್ಥಪೂರ್ಣವಾಗಬೇಕು, ಅಂದಾಗ ಸಾರ್ಥಕತೆ ಸಾದ್ಯ, ಸೇವೆ ಎಂದರೆ ಏನೇಬುಂದು ಮೈಗೂಡಿಸಿಕೊಂಡು ಹುಟ್ಟಿದವರೇ ಸೇವಾಲಾಲರು, ಪ್ರಧಾನಿ ಮೋದಿಯವರ ಮೂಲಕ ಕಂದಾಯ ಗ್ರಾಮಗಳನ್ನಾಗಿ ಮಾಡಿ, 58 ಸಾವಿರ ಜನರಿಗೆ ಪಟ್ಟಾ ನೀಡಿದ ಕೀರ್ತಿ ಸಿಎಂ ಬೊಮ್ಮಾಯಿಯವರಿಗೆ ಸಲ್ಲುತ್ತದೆ ಎಂದರು.
ಪುರಸಭೆ ಸದಸ್ಯ ಹಾಗೂ ಮರಾಠ ಸಮಾಜದ ತಾಲೂಕಾದ್ಯಕ್ಷ ಸುಭಾಸ್ ಚೌಹಾಣ್ ಮಾತನಾಡಿ ಬಂಜಾರ ಸಮುದಾಯ ಬಹಳ ಸಂಘಟನಾ ಚತುರ ಸಮುದಾಯವಾಗಿದೆ, ಕೇವಲ ಗ್ರಾಮೀಣ ಭಾಗದಲ್ಲಿ ಅಷ್ಟೇ ಇದ್ದ ಸಮುದಾಯ ಇಂದು ಮುಂಚೂಣಿ ನಗರ ಪ್ರದೇಶಗಳಲ್ಲಿ ಇದ್ದಾರೆ ಎಂದರು.
ಬಂಜಾರ ಸಮಾಜದ ತಾಲೂಕಾದ್ಯಕ್ಷ ದಾಮಲಪ್ಪ ಲಮಾಣಿ ಮಾತನಾಡಿ ಸೇವಾಲಾಲರು ಪವಾಡ ಪುರಷರಾಗಿದ್ದರು, ನಮ್ಮ ಸಮಾಜಕ್ಕೆ ಸಭಾಭವನ ನಿಮರ್ಾಣಕ್ಕೆ ಮನವಿ ಮಾಡಿದರೂ ಇಲ್ಲಿಯವರೆಗೂ ಬರವಸೆ ಈಡೇರಿಸಿಲ್ಲ ಕೂಡಲೆ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಪ್ರದರ್ಶನ ಅನಿವಾರ್ಯವಾಗುತ್ತದೆ ಎಂದರು.
ಸೀನಪ್ಪ ಲಮಾಣಿ, ಅರ್ಜಪ್ಪ ಲಮಾಣಿ, ಕವಿತಾ ರಾಠೋಡ ಮಾತನಾಡಿದರು, ಕಾಳಪ್ಪ ಬಡಿಗೇರ, ಸುಧೀರ ಲಮಾಣಿ, ನರಹರಿ ಕಟ್ಟಿ, ಸಂತೋಷ ದೊಡ್ಡಮನಿ, ಲಕ್ಷ್ಮಣ ಚೌಹಾಣ್, ಕವಿತಾ ರಾಠೋಡ, ಭರಮಣ್ಣ ಲಮಾಣಿ ಸೇರಿದಂತೆ ಸಮುದಯದ ಹಾಗೂ ವಿವಿಧ ಮುಖಂಡರು ಇದ್ದರು