ರಾಣೆಬೆನ್ನೂರ

ವಾಹನಗಳ ನಿಲುಗಡೆ ಸಂಚಾರಕ್ಕೆ ತೀವ್ರ ತೊಂದರೆ

ವಾಹನಗಳ ನಿಲುಗಡೆ ಸಂಚಾರಕ್ಕೆ ತೀವ್ರ ತೊಂದರೆ

ರಾಣೀಬೆನ್ನೂರು 23: ನಗರದ ಪಿಬಿ ರಸ್ತೆಯಲ್ಲಿ ಬಸ್ಟ್ಯಾಂಡ್ ಹತ್ತಿರ ನ್ಯಾಯಾ ಲಯದ ಕಟ್ಟಡದ ಸಂಕೀರ್ಣ ದಿಂದ ಪ್ರವಾಸಿ ಮಂದಿರದ ವರೆಗೆ ರಸ್ತೆಯ ಎಡ-ಬಲ ಬದಿಯಲ್ಲಿ ಅನೇಕ ವಾಹನ ಗಳು ನಿಲ್ಲುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ, ಪಾದಚಾರಿಗಳಿಗೆ ಹಾಗೂ ವರ್ತಕರಿಗೆ ತೀವ್ರ ತೊಂದರೆ ಯಾಗುತ್ತಿದೆ. ಈ ಬಗ್ಗೆ ಸಂಚಾರಿ ಆರಕ್ಷಕರಿಗೆ ಅನೇಕ ದೂರು ಸಲ್ಲಿಸಿದ್ದರೂ ಸಹ ಅವರು ಕಂಡು ಕಾನದಂತೆ ಓಡಾಡು ತ್ತಿರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ.  

ಸಂಚಾರದ ನಿಯಮ ಬಲ್ಲ ಅಧಿಕಾರಿಗಳು ನ್ಯಾಯಾಲಯ ದಿಂದ ಪ್ರವಾಸಿ ಮಂದಿರದ ವರೆಗೆ ಕಣ್ಣಾಡಿಸುತ್ತಾ ಹೋದರೆ ವಾಹನಗಳು ಎರಾ​‍್ರ-ಬಿರಿ​‍್ರಯಾಗಿ ನಿಂತು ಸಂಚಾರಕ್ಕೆ ತೊಂದರೆ ಯಾಗುತ್ತಿರುವು ದನ್ನುಕಾಣಬಹುದಾಗಿದೆ. ಇಲ್ಲಿಯ ಕೆಇಬಿ ಕಚೇರಿ ಎದುರು ಪಂಪಾ ಸಭಾಭವನದ ಹತ್ತಿರ ಹಳ್ಳಿಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವ ವಾಹನ ಗಳು ರಸ್ತೆಯನ್ನೆಲ್ಲಾ ಅತಿಕ್ರಮಿಸಿ ಕೊಂಡು ನಿಂತು ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ. ರಾಷ್ಟ್ರೀಯ ಹೆದ್ದಾರಿ ಎನಿಸಿಕೊಂಡಿರುವ ಈ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದು ಸಮಂಜಸವಲ್ಲ. ಈ ಸಂಗತಿ ಗೊತ್ತಿದ್ದರೂ ಕೂಡ ಸಂಚಾರಿ ಆರಕ್ಷಕರು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂದು ನೊಂದ ನಾಗರೀಕರು ಪ್ರಶ್ನಿಸಿ ದ್ದಾರೆ. ಬರುವ ಹೋಗುವ ವಾಹನಗಳನ್ನು ಜಬರ್‌ದಸ್ತಾಗಿ ನಿಲ್ಲಿಸಿ ಇಲ್ಲದ ಕಾರಣಗಳನ್ನು ಹೇಳಿ ದಂಡ ವಸೂಲಿ ಮಾಡು ತ್ತಾರೆ ಹಾಗೂ ಗಿಂಬಳವನ್ನು ಸಹ ಪಡೆಯುವುದಕ್ಕೆ ಆದ್ಯತೆ ನೀಡುತ್ತಾರೆಯೇ ಹೊರತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿಲ್ಲ. ಈ ಬಗ್ಗೆ ಸಂಚಾರಿ ಆರಕ್ಷಕರು ಇನ್ನು ಮುಂದಾ ದರು ಎಚ್ಚೆತ್ತು ಕ್ರಮ ಕೈಗೊಂಡು ಸಂಚಾರದ ವ್ಯವಸ್ಥೆ ಸುಗಮ ಗೊಳಿಸದೆ ಇದ್ದಲ್ಲಿ ಮೇಲಾಧಿ ಕಾರಿಗಳಿಗೆ ವಿಡಿಯೋ ಸಮೇತ ದೂರು ಸಲ್ಲಿಸಬೇಕಾ ಗುತ್ತದೆ ಎಂದು ನೊಂದ ನಾಗ  ರೀಕರು ಈ ಮೂಲಕ ಕೋರಿದ್ದಾರೆ. 


ಸುದ್ದಿ ಓದಿ