ರಾಷ್ಟ್ರೀಯ

ಸೆನ್ಸೆಕ್ಸ್: 44,428.01ರ ಗರಿಷ್ಠ ಮಟ್ಟಕ್ಕೆ ಏರಿಕೆ

ಸೆನ್ಸೆಕ್ಸ್: 44,428.01ರ ಗರಿಷ್ಠ ಮಟ್ಟಕ್ಕೆ ಏರಿಕೆ

ಮುಂಬೈ, ನವೆಂಬರ್ 24 : ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 350.86 ಗರಿಷ್ಠ ಮಟ್ಟವಾದ 44,428.01 ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಕೂಡ 108.95 ಅಂಕ ಏರಿಕೆ ಕಂಡು 13,035.40 ಕ್ಕೆ ತಲುಪಿದೆ.

ಆಟೋ, ಬ್ಯಾಂಕಿಂಗ್, ಹಣಕಾಸು ಮತ್ತು ಗ್ರಾಹಕರ ವಿವೇಚನೆ ಸರಕುಗಳು ಮತ್ತು ಸೇವೆಗಳಂತಹ ವಲಯ ಸೂಚ್ಯಂಕಗಳು ಮಾರುಕಟ್ಟೆಯನ್ನು ಎತ್ತರಕ್ಕೇರಿಸಲು ಕಾರಣವಾಗಿವೆ.  ಸೇರಿವೆ.

ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 44,487.65 ಮತ್ತು 44,247.12ರಲ್ಲಿತ್ತು.

ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 13,044.45 ಮತ್ತು 12,978ರಲ್ಲಿತ್ತು.

ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ  24 ಏರಿಕೆ ಕಂಡರೆ, 6 ಕುಸಿತ ಕಂಡಿವೆ.

ಏರಿಕೆ ಕಂಡ ಪ್ರಮುಖ ಷೇರುಗಳಲ್ಲಿ ಎಂ ಅಂಡ್ ಎಂ, ಮಾರುತಿ ಸುಜುಕಿ, ಟೆಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿವೆ.

ಸುದ್ದಿ ಓದಿ