ಸೆನ್ಸೆಕ್ಸ್ 300 ಅಂಕ ಏರಿಕೆ
ಮುಂಬೈ, ಸೆ 28 :ತೈಲ ಮತ್ತು ಅನಿಲ, ವಿದ್ಯುತ್, ಆಟೋ ಮತ್ತು ಹಣಕಾಸು ಷೇರುಗಳಲ್ಲಿ ಹೊಸ ಖರೀದಿ ಬೆಂಬಲದಿಂದ ಮುಂಬೈ ಷೇರು ವಿನಿಮಯ ಕೇಂದ್ರ( ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಸೋಮವಾರ ಬೆಳಗಿನ ವಹಿವಾಟಿನಲ್ಲಿ 368 ಅಂಕ ಏರಿಕೆ ಕಂಡು 37,756.25 ಕ್ಕೆ ತಲುಪಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ಸಹ 120 ಅಂಕ ಏರಿಕೆ ಕಂಡು 11,170.45ರಲ್ಲಿತ್ತು. ಸೆನ್ಸೆಕ್ಸ್, ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 37,810.37 ಮತ್ತು 37,544.05ರಲ್ಲಿತ್ತು.ನಿಫ್ಟಿ, ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,177.95 ಮತ್ತು 11,099.85ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 26 ಏರಿಕೆ ಕಂಡರೆ, 4 ಕಂಪೆನಿಗಳ ಷೇರುಗಳು ಕುಸಿತ ಕಂಡಿವೆ. ಏರಿಕೆ ಕಂಡ ಪ್ರಮುಖ ಷೇರುಗಳ ಪೈಕಿ ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್,ಬಜಾಜ್ ಫಿನ್‌ಸರ್ವ್ ಸೇರಿವೆ. ಉಳಿದಂತೆ, ಭಾರ್ತಿ ಏರ್‌ಟೆಲ್, ಇನ್ಫೋಸಿಸ್, ಹಿಂದ್ ಯೂನಿಲಿವರ್ ,ಟಿಸಿಎಸ್ ನಷ್ಟ ಕಂಡಿವೆ.