ರಾಷ್ಟ್ರೀಯ

ಸೆನ್ಸೆಕ್ಸ್ 254.57 ಅಂಕ ಏರಿಕೆ

ಸೆನ್ಸೆಕ್ಸ್ 254.57 ಅಂಕ ಏರಿಕೆ

ಮುಂಬೈ, ಅ 16 : ಲೋಹ, ರಿಯಾಲ್ಟಿ, ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳ ಭಾರೀ ಖರೀದಿ ಬೆಂಬಲದಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ 254.57 ಅಂಕ ಏರಿಕೆ ಕಂಡು 39.982.98ರಲ್ಲಿತ್ತು.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 82.10 ಅಂಕಗಳಿಂದ 11,662.45 ಕ್ಕೆ ಏರಿದೆ.ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 40,125.71 ಮತ್ತು 39,699.42ರಲ್ಲಿತ್ತು.  ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,789.75 ಮತ್ತು 11,667.85ರಲ್ಲಿತ್ತು.  ಏರಿಕೆ ಕಂಡು ಪ್ರಮುಖ ಷೇರುಗಳಲ್ಲಿ ಟಾಟಾ ಸ್ಟೀಲ್,ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್‌ಗ್ರಿಡ್ ಮತ್ತು ಒಎನ್‌ಜಿಸಿ ಸೇರಿವೆ.  ನಷ್ಟ ಕಂಡ ಷೇರುಗಳಲ್ಲಿ ಎಂ ಅಂಡ್ ಎಂ, ರಿಲಯನ್ಸ್ ಇಂಡಸ್ಟ್ರೀಸ್,  ಏಷ್ಯನ್ ಪೇಂಟ್ಸ್  ಮತ್ತು ನೆಸ್ಲೆ ಇಂಡಿಯಾ ಸೇರಿವೆ. 

  



ಸುದ್ದಿ ಓದಿ