ರಾಷ್ಟ್ರೀಯ

ಗರಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 142 ಅಂಕ ಏರಿಕೆ

ಗರಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ  142 ಅಂಕ ಏರಿಕೆ

ಮುಂಬೈ, ಡಿಸೆಂಬರ್ 8: ಇಂಧನ, ಎಫ್‍ಎಂಸಿಜಿ ಮತ್ತು ಹಣಕಾಸು ಷೇರುಗಳಿಗೆ ಭಾರೀ ಖರೀದಿ ಬೆಂಬಲ ವ್ಯಕ್ತವಾದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‍ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 142 ಅಂಕ ಏರಿಕೆ ಕಂಡು ಹೊಸ ಎತ್ತರವಾದ 45,568.80ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‍ಎಸ್‍ಇ)ದ ಸೂಚ್ಯಂಕ ನಿಫ್ಟಿ ಸಹ 49.90 ಅಂಕ ಏರಿಕೆ ಕಂಡು 13,405.65 ಕ್ಕೆ ತಲುಪಿದೆ.

ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 45,728.85 ಮತ್ತು 45,459.74ರಲ್ಲಿತ್ತು. 

ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 13,435.45 ಮತ್ತು 13,363.15 ರಲ್ಲಿತ್ತು. 

ಬಿಇಎಸ್‍ಇ ನ ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 18 ಏರಿಕೆ ಕಂಡರೆ 12 ಇಳಿಕೆ ಕಂಡಿವೆ

ಲಾಭ ಕಂಡ ಷೇರುಗಳ ಪೈಕಿ ಅಲ್ಟ್ರಾಸೆಮ್ಕೊ,ಶೇ 2.93 ರಿಲಯನ್ಸ್ ಇಂಡಸ್ಟ್ರೀಸ್ ಶೇ 2.37, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 1.82, ಮಾರುತಿ ಸುಜುಕಿ ಶೇ 1.06 ಹಾಗೂ ಎಚ್‌ಡಿಎಫ್‌ಸಿ ಶೇ 0.97ರಷ್ಟು ಏರಿಕೆ ದಾಖಲಿಸಿವೆ.

ನಷ್ಟ ಕಂಡ ಷೇರುಗಳ ಪೈಕಿ ಸನ್ ಫಾರ್ಮಾ ಶೇ 1.80, ಇಂಡಸ್‍ ಇಂಡ್‍ ಬ್ಯಾಂಕ್‍ ಶೇ 1.36, ಟೆಕ್ ಮಹೀಂದ್ರಾ ಶೇ 0.85 ಮತ್ತು ಭಾರ್ತಿ ಏರ್ ಟೆಲ್‍ ಶೇ 0.77 ರಷ್ಟು ಇಳಿಕೆ ಕಂಡಿವೆ.

ಸುದ್ದಿ ಓದಿ