ರಾಷ್ಟ್ರೀಯ

ಸೆನ್ಸೆಕ್ಸ್ 94.71 ಅಂಕ ಚೇತರಿಕೆ

ಸೆನ್ಸೆಕ್ಸ್ 94.71 ಅಂಕ ಚೇತರಿಕೆ

ಮುಂಬೈ, ಸೆಪ್ಟೆಂಬರ್ 30: ಗ್ರಾಹಕ ವಸ್ತುಗಳು, ಕೈಗಾರಿಕೆಗಳು, ಎಫ್‍ಎಂಸಿಜಿ ಮತ್ತು ಆರೋಗ್ಯ ರಕ್ಷಣೆ ಷೇರುಗಳಿಗೆ ಖರೀದಿ ಬೆಂಬಲ ವ್ಯಕ್ತವಾದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಬುಧವಾರ ದಿನದ ವಹಿವಾಟಿನ ಅಂತ್ಯಕ್ಕೆ 94.71 ಅಂಕ ಏರಿಕೆ ಕಂಡು 38,067.93ರಲ್ಲಿತ್ತು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 4.10 ಅಂಕ ಏರಿಕೆ ಕಂಡು 11,226.50ರಲ್ಲಿತ್ತು.

ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 38,236.34 ಮತ್ತು 37,828.11 ರಲ್ಲಿತ್ತು.

ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,295.40  ಮತ್ತು 11,184.55ರಲ್ಲಿತ್ತು.     

ಲಾಭ ಗಳಿಸಿದ ಷೇರುಗಳ ಪೈಕಿ, ಟೆಕ್ ಮಹೀಂದ್ರ, ಟೈಟನ್, ನೆಸ್ಲೆ ಇಂಡಿಯಾ, ಐಟಿಸಿ, ಹಿಂದ್ ಯೂನಿಲಿವರ್ ಸೇರಿವೆ.

ಉಳಿದಂತೆ, ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಎಂ ಅಂಡ್ ಎಂ ನಷ್ಟ ಕಂಡ ಷೇರುಗಳಲ್ಲಿ ಸೇರಿವೆ.

ಸುದ್ದಿ ಓದಿ