ಸೆನ್ಸೆಕ್ಸ್ 600 ಅಂಕ ಜಿಗಿತ
ಮುಂಬೈ, ಏಪ್ರಿಲ್ 27,ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟಿನಲ್ಲಿ 600 ಅಂಕ ಏರಿಕೆ ಕಂಡು 31.927.98ರಲ್ಲಿತ್ತು.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ) ಸೂಚ್ಯಂಕ ನಿಫ್ಟಿ ಸಹ 177 ಅಂಕ ಏರಿಕೆ ಕಂಡು 9,331.95ರ ಮಟ್ಟದಲ್ಲಿತ್ತು.ಶುಕ್ರವಾರದ ವಹಿವಾಟಿನಲ್ಲಿ 535 ಅಂಕ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ, ಸೋಮವಾರ ಬೆಳಗಿನ ವಹಿವಾಟಿನಲ್ಲಿ ರಿಯಾಲ್ಟಿ, ಬ್ಯಾಂಕಿಂಗ್, ಹಣಕಾಸು ಮತ್ತು ಆರೋಗ್ಯದಂತಹ ವಲಯ ಸೂಚ್ಯಂಕಗಳ ಏರಿಕೆಯಿಂದ ಉತ್ತಮ ಆರಂಭ ಪಡೆಯಿತು. ಸೆನ್ಸೆಕ್ಸ್ ಈ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 31,927.98 ಮತ್ತು 31,651.58ರ ಮಟ್ಟದಲ್ಲಿತ್ತು. ನಿಫ್ಟಿ, ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 9,331.95 ಮತ್ತು 9,250.35ರ ನಡುವೆ ವಹಿವಾಟು ನಡೆಸಿತು. ಆಕ್ಸಿಸ್ ಬ್ಯಾಂಕ್ ಶೇ 3.32ರಷ್ಟು ಏರಿಕೆ ಕಂಡು 417.50 ರೂ ನಲ್ಲಿ, ಸನ್ ಫಾರ್ಮಾ ಶೇ 3.29ರಷ್ಟು ಏರಿಕೆ ಕಂಡು 501.20 ರೂ.ನಲ್ಲಿ, ಇಂಡಸ್ಇಂಡ್ ಬ್ಯಾಂಕ್ ಶೇ 3.11ರಷ್ಟು ಏರಿಕೆ ಕಂಡು 395 ರೂ.ನಲ್ಲಿ, ಬಜಾಜ್ ಫೈನಾನ್ಸ್ ಶೇ 2.88ರಷ್ಟು ಏರಿಕೆ ಕಂಡು 2516.20 ರೂ.ನಲ್ಲಿ ಮತ್ತು ಮಾರುತಿ ಸುಜುಕಿ ಶೇ 2.82ರಷ್ಟು ಏರಿಕೆ ಕಂಡು 5188 ರೂ.ನಲ್ಲಿತ್ತು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 